2007 ಭಾರತೀಯ ಚೆಸ್ ಕ್ರೀಡೆಯ ಪಾಲಿಗೆ ಸುವರ್ಣ ಪರ್ವ ಇದ್ದಂತೆ. ಹಳೆ ತಲೆಮಾರು ಎನ್ನಲು ಆಗದ ವಿಶ್ವನಾಥನ್ ಆನಂದ್ ಫಿಡೆಯ ಶ್ರೇಯಾಂಕದ ಅಗ್ರ ಕ್ರಮಾಂಕವನ್ನು ಅಲಂಕರಿಸುವ ಜೊತೆಗೆ ವಿಶ್ವ ಚಾಂಪಿಯನ್ ಆಗಿದ್ದು, ಭೂತದಲ್ಲಿ ಸೇರಲಿರುವ ವರ್ಷದ ಚೆಸ್ ಇತಿಹಾಸದಲ್ಲಿನ ಪ್ರಮುಖ ಘಟ್ಟ.
ಹದಿನೈದು ಹೆಚ್ಚು ವರ್ಷಗಳಿಂದ ಚೆಸ್‌ನೊಂದಿಗೆ ಸಂಬಂಧ ಇಟ್ಟುಕೊಂಡಿರುವ ವಿಶಿ ಯಾನಿ ವಿಶ್ವನಾಥನ್ ಆನಂದ್ ಅಗ್ರ ಮೂವರ ಸ್ಥಾನದಲ್ಲಿ ಇದ್ದುದು ಅವರ ನಿರಂತರತೆಗೆ ಸಾಕ್ಷಿ. ಮೇಲಾಗಿ 2007ರ ಅವಧಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವ ಚೆಸ್ ಚಾಂಪಿಯನ್‌ಷಿಪ್ ತಮ್ಮದಾಗಿಸಿಕೊಂಡರು.
ಕೊನೇರು ಹಂಪಿ ವಿಶಿಯ ಸಾಧನೆಯೊಂದಿಗೆ ಭಾರತೀಯ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ವರ್ಷದ ಅವಧಿಯಲ್ಲಿ ಇಲೋ ಶ್ರೇಯಾಂಕದಲ್ಲಿ 2600 ಅಂಕಗಳೊಂದಿಗೆ ಮೇಲ್ದರ್ಜೆಗೆರಿಸಿಕೊಂಡರು. ಜುದಿತ್ ಪೊಲ್ಗಾರ್ ನಂತರ ಈ ಹಂತ ತಲುಪಿದ ಎರಡನೆ ಮಹಿಳಾ ಗ್ರ್ಯಾಂಡ್ ಮಾಸ್ಟರ್. ಕೊನೇರು ಹಂಪಿಯ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ND
ಮಕಾವುದಲ್ಲಿ ನಡೆದ ಏಷಿಯನ್ ಒಳಾಂಗಣ ಕ್ರೀಡಾಕೂಟದಲ್ಲಿ ಅಪರೂಪದ ಚೆಸ್ ಪ್ರದರ್ಶನ ಪ್ರದರ್ಶಿಸಿದ ಕೊನೇರು ಎರಡು ಸ್ವರ್ಣ, ಒಂದು ರಜತ ಪದಕಗಳನ್ನು ಕೊರಳಿಗೆ ಏರಿಸಿಕೊಂಡರು. ನೇದರ್ಲ್ಯಾಂಡ್ ಮತ್ತು ಲುಕ್ಸಂಬರ್ಗ್‌ನಲ್ಲಿ ನಡೆದ ಚೆಸ್ ಟೂರ್ನಿಗಳಲ್ಲಿ ಚಾಂಪಿಯನ್ ದಕ್ಕಿಸಿಕೊಳ್ಳುವ ಮೂಲಕ ತಮ್ಮ ಚೆಸ್ ಪ್ರಭುತ್ವವನ್ನು ಸ್ಥಾಪಿಸಿದರು.
ತಾನಿಯಾ ಸಚದೇವ್ ಏಷಿಯನ್ ಮಹಿಳಾ ಪ್ರಶಸ್ತಿ, ಮತ್ತು ರಾಷ್ಟ್ರೀಯ ಮಹಿಳಾ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಸತತವಾಗಿ ಎರಡನೆ ಬಾರಿ ಗೆದ್ದುಕೊಂಡರು.
ಕೆ. ಶಶಿಕಿರಣ್ 2007 ರಲ್ಲಿ ತಮ್ಮ ಚೆಸ್ ಜೀವನದಲ್ಲಿ 2700 ಇಲೋ ಶ್ರೇಯಾಂಕ ಅಂಕಗಳನ್ನು ಗಳಿಸುವ ಮೂಲಕ ಉತ್ತುಂಗದತ್ತ ಸಾಗಲು ಪ್ರಾರಂಭಿಸಿದರು. ಏರೊಸೋವಿಟ್ ಚೆಸ್ ಟೂರ್ನಿಯಲ್ಲಿ ಶಶಿಕಿರಣ್ ಪ್ರದರ್ಶನ ಕಳಪೆಯಾಗಿದ್ದು ಅವರ ಮುನ್ನಡೆಗೆ ಅಲ್ಪಕಾಲದ ದಕ್ಕೆ ತಂದಿತು.