ಕಿರು ಮಾದರಿ ಕ್ರಿಕೆಟ್ ಎಂದರೆ ಹೊಡೆಬಡಿಯ ಆಟಕ್ಕೇ ಫೇಮಸ್. ಕೇವಲ 120 ಎಸೆತಗಳ ಆಟವಾದರೂ ಈ ಮಾದರಿಯಲ್ಲಿ ಅನೇಕ ಕ್ರಿಕೆಟಿಗರು ಶತಕ ಸಿಡಿಸಿ ಮಿಂಚಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ಆಟಗಾರ ಸುರೇಶ್ ರೈನಾ. ಅವರು 2010 ರಲ್ಲಿ ಈ ಸಾಧನೆ ಮಾಡಿದ್ದರು. ಅವರಲ್ಲದೆ ಬೇರೆ ಯಾರು ಈ ಸಾಧನೆ ಮಾಡಿದ್ದಾರೆ ನೋಡೋಣ.
ಇದುವರೆಗೆ 10 ಬಾರಿ ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಶತಕ ದಾಖಲಾಗಿದೆ. ಆ ಪೈಕಿ ನಾಲ್ಕು ಬಾರಿ ರೋಹಿತ್ ಶರ್ಮಾ ಶತಕ ದಾಖಲಿಸಿದ್ದರೆ, ಕೆಎಲ್ ರಾಹುಲ್ 2 ಬಾರಿ ಈ ಸಾಧನೆ ಮಾಡಿದ್ದಾರೆ.