ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ 126 ರನ್ ಗಳ ಭರ್ಜರಿ ಶತಕ ದಾಖಲಿಸಿದ್ದಾರೆ.
ಏಕದಿನ ಸರಣಿಯಲ್ಲಿ ದ್ವಿಶತಕ, ಶತಕ ಗಳಿಸಿದ್ದ ಗಿಲ್ ಇದೀಗ ಟಿ20 ಯಲ್ಲೂ ಶತಕ ಬಾರಿಸಿ ಕಿರು ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.
ಇದಲ್ಲದೆ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ರನ್, ಮೂರೂ ಮಾದರಿಯಲ್ಲಿ ಶತಕ ಗಳಿಸಿದ ಸಾಧನೆ ಮಾಡಿದ ಆಟಗಾರರ ಸಾಲಿಗೆ ಗಿಲ್ ಸೇರ್ಪಡೆಗೊಂಡಿದ್ದಾರೆ.