ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.
Photo credit:Twitterಮೊದಲ ಪಂದ್ಯದಲ್ಲಿ ಗಿಲ್ ದ್ವಿಶತಕ ಸಿಡಿಸಿದ್ದರು. ಎರಡನೇ ಪಂದ್ಯದಲ್ಲಿ ಅಜೇಯರಾಗಿ ತಂಡಕ್ಕೆ ಗೆಲುವು ಕೊಡಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಮತ್ತೆ ಶತಕ ಸಿಡಿಸಿದ್ದಾರೆ.
ಇದು ಏಕದಿನ ಪಂದ್ಯಗಳಲ್ಲಿ ಅವರ ನಾಲ್ಕನೇ ಶತಕವಾಗಿದೆ. ವಿಶೇಷವೆಂದರೆ ಮೂರೂ ಶತಕಗಳು ಇದೇ ವರ್ಷ ಬಂದಿದೆ. ರೋಹಿತ್ ಶರ್ಮಾ ಜೊತೆಗೆ ದ್ವಿಶತಕದ ಜೊತೆಯಾಟದ ದಾಖಲೆಯನ್ನೂ ಮಾಡಿದ್ದಾರೆ.
ಇದು ಏಕದಿನ ಪಂದ್ಯಗಳಲ್ಲಿ ಅವರ ನಾಲ್ಕನೇ ಶತಕವಾಗಿದೆ. ವಿಶೇಷವೆಂದರೆ ಮೂರೂ ಶತಕಗಳು ಇದೇ ವರ್ಷ ಬಂದಿದೆ. ರೋಹಿತ್ ಶರ್ಮಾ ಜೊತೆಗೆ ದ್ವಿಶತಕದ ಜೊತೆಯಾಟದ ದಾಖಲೆಯನ್ನೂ ಮಾಡಿದ್ದಾರೆ.