ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಆರ್. ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಈಗ ಭಾರೀ ಸದ್ದು ಮಾಡುತ್ತಿದೆ.
ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ನಿನ್ನೆ ಘೋಷಣೆ ಮಾಡಿತ್ತು. ಅದರಂತೆ ಮಾರ್ಚ್ 17 ರಂದು ಸಿನಿಮಾ ತೆರೆಗೆ ಬರುವುದು ಕನ್ ಫರ್ಮ್ ಆಗಿದೆ.
ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನ. ಇದೀಗ ಅಪ್ಪು ಸವಿನೆನಪಿಗಾಗಿ ಅವರ ಹುಟ್ಟುಹಬ್ಬದಂದೇ ಕಬ್ಜ ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.