ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಸ್ಪರ್ಧಿಗಳಾಗಿದ್ದ ರಾಕೇಶ್ ಅಡಿಗ, ಅಮೂಲ್ಯ, ಅನುಪಮಾ, ನೇಹಾ ಗೌಡ, ದಿವ್ಯಾ ಉರುಡುಗ ಮತ್ತೆ ಜೊತೆಯಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ಐವರೂ ಸದಾ ಜೊತೆಯಾಗಿದ್ದರು. ಇವರೆಲ್ಲರ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಮುಂದುವರಿದಿದೆ.
ಇದೀಗ ಐದೂ ಮಂದಿ ಬಿಬಿಕೆ ಸ್ಪರ್ಧಿಗಳು ಜೊತೆ ಸೇರಿದ್ದು, ಈ ಸಂತೋಷದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.