ಹೆಣ್ಣು ಮಕ್ಕಳಿಗೆ ಕೂದಲಿನ ಬಹುದೊಡ್ಡ ಸಮಸ್ಯೆಗಳಲ್ಲಿ ಸಿಕ್ಕುಗಟ್ಟುವುದೂ ಒಂದು. ಕೂದಲು ಸಿಕ್ಕುಗಟ್ಟಿದರೆ ಅದನ್ನು ತಕ್ಷಣವೇ ಬಿಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ಕೂದಲಿಗೆ ಡ್ಯಾಮೇಜ್ ಆಗಬಹುದು. ಸಿಕ್ಕು ಬಿಡಿಸಲು ಇಲ್ಲಿದೆ ಟಿಪ್ಸ್.
Photo Credit: Instagram, AI image
ಪ್ರತಿನಿತ್ಯ ಎರಡು ಬಾರಿಯಾದರೂ ಕೂದಲುಗಳನ್ನು ಚೆನ್ನಾಗಿ ಬಾಚಿಕೊಳ್ಳುವ ಅಭ್ಯಾಸವಿರಲಿ
ಕೂದಲು ಬಾಚುವಾಗ ಬುಡವರೆಗೆ ಬಾಚಣಿಗೆ ತಾಕುವಂತೆ ಚೆನ್ನಾಗಿ ಬಾಚಿಕೊಳ್ಳಿ
ಆದಷ್ಟು ಅಗಲವಾದ ಹಲ್ಲಿರುವ ಬಾಚಣಿಗೆಯಿಂದ ಕೂದಲು ಬಾಚಿಕೊಂಡರೆ ಸಿಕ್ಕು ಬಿಡಿಸುವುದು ಸುಲಭ
ಅಲ್ಯುವೀರಾ ಜೆಲ್ ಗೆ ಸ್ವಲ್ಪ ನೀರು ಹಾಕಿ ಕೂದಲಿಗೆ ಸ್ಪ್ರೇ ಮಾಡಿಕೊಂಡರೆ ಸಿಕ್ಕು ಆಗದು
ತುಂಬಾ ಸಿಕ್ಕಾಗಿದ್ದರೆ ಮೊದಲು ಕೈಯಿಂದ ಬಿಡಿಸಿಕೊಂಡು ನಂತರ ಬಾಚಣಿಗೆ ಪ್ರಯೋಗಿಸಿ
ತುಂಬಾ ಸಿಕ್ಕಾಗಿದ್ದರೆ ಮೊದಲು ಕೊಬ್ಬರಿ ಎಣ್ಣೆ ಚೆನ್ನಾಗಿ ಹಚ್ಚಿ ಬಳಿಕ ಬಾಚಿಕೊಂಡರೆ ಉತ್ತಮ
ಮನೆಯಲ್ಲಿರುವಾಗ ಕೂದಲನ್ನು ಫ್ರೀ ಬಿಡುವ ಬದಲು ಹಣಿದುಕೊಂಡು ಕಟ್ಟಿಕೊಳ್ಳಿ