ತೂಕ ಇಳಿಕೆ ಮಾಡಬೇಕು ಎಂದು ಏನೇನೋ ಸರ್ಕಸ್ ಮಾಡುತ್ತಾರೆ. ತೂಕ ಇಳಿಕೆಗಾಗಿ ಡಯಟ್, ವ್ಯಾಯಾಮ ಮಾಡುವುದೇನೋ ಸರಿ. ಆದರೆ ತೂಕ ಇಳಿಕೆ ಮಾಡುವ ಸಮಯದಲ್ಲಿ ಈ ಕೆಲವೊಂದು ತಪ್ಪುಗಳನ್ನು ಮಾಡಿದರೆ ಪ್ರಯೋಜನವಾಗದು.
Photo Credit: Instagram, AI image
ತೂಕ ಇಳಿಕೆ ಮಾಡುವಾಗ ಡಯಟ್, ವ್ಯಾಯಾಮ ಮಾಡುವುದು ಅತೀ ಮುಖ್ಯವಾಗಿರುತ್ತದೆ
ತೂಕ ಇಳಿಕೆ ಮಾಡುವ ಸಮಯದಲ್ಲಿ ಸರಿಯಾದ ಜೀವನ ಶೈಲಿ ಅನುಸರಿಸಿದರೆ ಮಾತ್ರ ಪ್ರಯೋಜನವಾಗಬಹುದು
ಊಟ ಕಡಿಮೆ ಮಾಡಬೇಕೆಂದು ಬೆಳಗಿನ ಉಪಾಹಾರ ಬಿಟ್ಟರೆ ತೂಕ ಇಳಿಕೆಯಾಗದು
ರಾತ್ರಿಯೂ ಅಷ್ಟೇ 6 ಗಂಟೆಯೊಳಗೆ ಊಟ ಮಾಡಬೇಕು, ರಾತ್ರಿ 9 ರ ನಂತರ ಊಟ ಮಾಡಬೇಡಿ
ತೂಕ ಇಳಿಕೆ ಮಾಡುವವರು ಅರೆ ಹೊಟ್ಟೆಯಲ್ಲಿರಬೇಕು, ತುಂಬಾ ಕಡಿಮೆ ತಿನ್ನಬೇಕು ಎನ್ನುವುದು ತಪ್ಪು
ಕಡಿಮೆ ತಿನ್ನುವ ಭರದಲ್ಲಿ ಪ್ರೊಟೀನ್ ಅಂಶಗಳನ್ನು ಸಾಕಷ್ಟು ಸೇವನೆ ಮಾಡದೇ ಇರುವುದು ತಪ್ಪು
ಲೈಟ್ ಫುಡ್ ತಿನ್ನಬೇಕೆಂದು ಸಂಸ್ಕರಿತ, ಕರಿದ ತಿಂಡಿ, ಬೀದಿಬದಿ ತಿಂಡಿಗಳನ್ನು ತಿನ್ನಬಾರದು