ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳಿಂದ ಬರುವ ಸೋಂಕು ರೋಗಗಳು ಹೆಚ್ಚಾಗಿ ಬರುತ್ತಿರುತ್ತವೆ. ವೈರಲ್ ಜ್ವರದಿಂದ ಹಿಡಿದು ಚರ್ಮದ ಅಲರ್ಜಿಯವರೆಗೆ ಅನೇಕ ಬ್ಯಾಕ್ಟೀರಿಯಾದಿಂದ ಬರುವ ರೋಗಗಳಿವೆ. ಇದನ್ನು ತಡೆಯಲು ಯಾವ ಆಹಾರ ಸೇವಿಸಬೇಕು ನೋಡಿ.
Photo Credit: Social Media
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ, ಝಿಂಕ್ ಅಂಶವಿರುವ ಆಹಾರಗಳನ್ನು ಸೇವಿಸಿ
ಕುಂಬಳಕಾಯಿ ಬೀಜ ಸೇವನೆಯಿಂದ ಶರೀರಕ್ಕೆ ಸಾಕಷ್ಟು ಝಿಂಕ್ ಅಂಶ ಸೇರ್ಪಡೆಯಾಗುತ್ತದೆ
ಫೈಬರ್ ಅಂಶದ ಜೊತೆಗೆ ಝಿಂಕ್ ಅಂಶವೂ ಹೇರಳವಾಗಿರುವ ಓಟ್ಸ್ ಸೇವನೆ ಮಾಡಿ
ಆಡಿನ ಮಾಂಸದಲ್ಲಿ ಝಿಂಕ್ ಅಂಶ ಹೇರಳವಾಗಿದ್ದು ಬ್ಯಾಕ್ಟೀರಿಯಾ ರೋಗಗಳನ್ನು ತಡೆಯುತ್ತದೆ
ಅಳಸಂಡೆ, ಬೀನ್ಸ್ ಸೇರಿದಂತೆ ಬೇಳೆ ಕಾಳುಗಳಲ್ಲಿ ಝಿಂಕ್ ಅಂಶ ಹೇರಳವಾಗಿದ್ದು ಇವುಗಳನ್ನು ಸೇವಿಸಿ
ಹಾಲು, ಮೊಸರು, ತುಪ್ಪ ಮೊದಲಾದ ಡೈರಿ ಉತ್ಪನ್ನಗಳಲ್ಲಿ ಝಿಂಕ್ ಅಂಶ ಹೇರಳವಾಗಿ ಸಿಗುತ್ತದೆ
ಮೊಟ್ಟೆಯಲ್ಲಿ ವಿಶೇಷವಾಗಿ ಝಿಂಕ್ ಅಂಶವಿದ್ದು ಬ್ಯಾಕ್ಟೀರಿಯಾಗಳಿಂದ ದೇಹ ಸಂರಕ್ಷಿಸುತ್ತದೆ