ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ವಯಸ್ಕರಿಗೂ ಕೂದಲು ಉದುರುವಿಕೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಆಹಾರದಲ್ಲಿ ಕೆಲವು ಪೋಷಕಾಂಶಗಳ ಕೊರತೆಯೂ ಕಾರಣವಾಗುತ್ತದೆ. ಹಾಗಿದ್ದರೆ ಕೂದಲು ಉದುರುವಿಕೆ ತಡೆಯಲು ಯಾವ ಆಹಾರ ಸೇವಿಸಬೇಕು ನೋಡಿ.
Photo Credit: Social Media
ವಿಟಮಿನ್ ಕೆ, ಜಿಂಕ್ ಅಂಶಗಳು ದೇಹಕ್ಕೆ ಸರಿಯಾಗಿ ಪೂರೈಕೆಯಾಗದೇ ಇದ್ದಾಗ ಕೂದಲು ಉದುರಬಹುದು
ಇದಕ್ಕೆ ಪ್ರತಿನಿತ್ಯ ಆಹಾರದಲ್ಲಿ ಒಂದು ಮೊಟ್ಟೆಯನ್ನು ಸೇವಿಸುತ್ತಿದ್ದರೆ ಕೂದಲು ಉದುರುವಿಕೆ ಕಡಿಮೆಯಾಗಬಹುದು
ವಿಟಮಿನ್ ಎ, ಸಿ ಅಂಶ ಹೇರಳವಾಗಿರುವ ಪಾಲಕ್ ಸೊಪ್ಪನ್ನು ಹೇರಳವಾಗಿ ಸೇವಿಸಿದರೆ ಕೂದಲು ಆರೋಗ್ಯವಾಗಿರುತ್ತದೆ
ಕೊಬ್ಬಿನಾಂಶವಿರುವ ಮೀನನ್ನು ಸೇವಿಸುವುದರಿಂದ ತಲೆ ಕೂದಲಿನ ಬೇರು ಗಟ್ಟಿಯಾಗುತ್ತದೆ
ಬಿಟಾ ಕ್ಯಾರೊಟಿನ್ ಅಂಶವಿರುವ ಸಿಹಿ ಗೆಣಸನ್ನು ಸಾಕಷ್ಟು ಸೇವನೆ ಮಾಡಿದರೆ ಕೂದಲು ಚೆನ್ನಾಗಿರುತ್ತದೆ
ವಿಟಮಿನ್ ಎ, ಇ ಹೇರಳವಾಗಿರುವ ಅವಕಾಡೊ ಹಣ್ಣಿನಲ್ಲಿ ಕೂದಲಿನ ಆರೋಗ್ಯಕ್ಕೆ ಬೇಕಾದ ಅಂಶಗಳಿವೆ
ಝಿಂಕ್, ವಿಟಮಿನ್ ಎ, ಇ ಅಂಶವಿರುವ ಬಾದಾಮಿಯನ್ನು ಸಾಕಷ್ಟು ಸೇವನೆ ಮಾಡುತ್ತಿದ್ದರೆ ಉತ್ತಮ