ಕೇರಳದಲ್ಲಿ ಈಗಾಗಲೇ ಭಯ ಹುಟ್ಟಿಸಿರುವ ನಿಫಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟರೂ ಅಚ್ಚರಿಯಿಲ್ಲ. ಮುಖ್ಯವಾಗಿ ಬಾವಲಿಯಿಂದ ಹರಡುವ ರೋಗ ಇದಾಗಿದ್ದು, ಮಾರಣಾಂತಿಕವಾಗಬಹುದು. ಇದರ ಆರಂಭಿಕ ಲಕ್ಷಣಗಳು ಮತ್ತು ಕಾರಣಗಳು ಇಲ್ಲಿವೆ.
Photo Credit: Social Media
ಬಾವಲಿ ಕಚ್ಚಿದ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ನಿಫಾ ವೈರಸ್ ಹರಡಬಹುದಾಗಿದೆ
ಬಾವಲಿಯ ಜೊಲ್ಲು ರಸದಿಂದ ಹಣ್ಣುಗಳಲ್ಲಿ ವೈರಸ್ ಉತ್ಪತ್ತಿಯಾಗಿ ಮನುಷ್ಯರಿಗೆ ಹರಡಬಹುದು
ಹೀಗಾಗಿ ಗೀರು, ಗಾಯಗಳಾಗಿರುವ, ಅರ್ಧ ಕತ್ತರಿಸಿದಂತಹ ಹಣ್ಣು, ತರಕಾರಿಗಳನ್ನು ಸೇವಿಸಬೇಡಿ
ವೈರಸ್ ದೇಹ ತಗುಲಿದೆ 5-14 ದಿನಗಳಲ್ಲಿ ಅದರ ಲಕ್ಷಣಗಳು ಕಾಣಲು ಆರಂಭವಾಗುತ್ತದೆ
ಮೊದಲು ತಲೆನೋವು, ತೀವ್ರ ಜ್ವರ, ಮಾಂಸಖಂಡಗಳಲ್ಲಿ ನೋವು ಕಂಡುಬರುತ್ತದೆ
ದಿನಕಳೆದಂತೆ ಮೆದುಳಿನಲ್ಲಿ ಉರಿಯೂತದ ಲಕ್ಷಣಗಳು ಕಂಡುಬಂದು ಗಂಭೀರವಾಗಬಹುದು
ಕ್ರಮೇಣ ಉಸಿರಾಟದ ಸಮಸ್ಯೆ, ಗಂಟಲು ನೋವು, ತೀವ್ರ ಕೆಮ್ಮು ಕೂಡಾ ಕಾಣಿಸಿಕೊಳ್ಳಬಹುದು.