ಮಳೆಗಾಲದಲ್ಲಿ ನೊಣಗಳ ಕಾಟ ಜಾಸ್ತಿಯಾಗುವುದು ಸಹಜ. ಅದರಲ್ಲೂ ಅಡುಗೆ ಮನೆಯಲ್ಲಿ ನೊಣಗಳ ಕಾಟದಿಂದಾಗಿ ತಿನ್ನುವ ಆಹಾರದ ಮೇಲೂ ಕೂತು ರೋಗ ಹರಡುವ ಭಯ ಕಾಡುತ್ತದೆ. ನೊಣಗಳ ಕಾಟ ತಡೆಯಲು ಏನು ಮಾಡಬಹುದು ನೋಡಿ.
Photo Credit: Social Media
ಡಿಶ್ ಸೋಪ್, ವಿನೇಗರ್ ಮತ್ತು ಬೇಕಿಂಗ್ ಸೋಡಾದ ದ್ರಾವಣ ಮಾಡಿ ನೊಣ ಬರುವ ಜಾಗದಲ್ಲಿ ಸ್ಪ್ರೇ ಮಾಡಿ
ಆಪಲ್ ಸೈಡ್ ವಿನೇಗರ್, ಸಕ್ಕರೆ ಮತ್ತು ಬೇಕಿಂಗ್ ಸೋಡಾ ಸೇರಿಸಿದ ದ್ರಾವಣವನ್ನು ಸ್ಪ್ರೇ ಮಾಡಿ
ಕೊಳೆತ ಹಣ್ಣನ್ನು ಒಂದು ಬಾಟಲಿಯಲ್ಲಿ ಹಾಕಿ ನೊಣ ಬಂದು ಕೂತಾಗ ಮುಚ್ಚಳ ಹಾಕಿ
ಉಪ್ಪು ಮತ್ತು ನೀರು ಸೇರಿಸಿ ದ್ರಾವಣ ಮಾಡಿ ನೊಣ ಬರುವ ಜಾಗದಲ್ಲಿ ಚೆನ್ನಾಗಿ ಸ್ಪ್ರೇ ಮಾಡಿ
ನಿಂಬೆ ಹಣ್ಣಿಗೆ ಲವಂಗದ ಚೂರುಗಳನ್ನು ಹಾಕಿ ನೊಣ ಬರುವ ಜಾಗಗಳಲ್ಲಿ ಇದನ್ನು ಇಡಿ
ಓಂ ಕಾಳು ಮತ್ತು ಬೆಳ್ಳುಳ್ಳಿಯನ್ನು ಜಜ್ಜಿ ನೀರು ಹಾಕಿ ದ್ರಾವಣ ಮಾಡಿ ಸ್ಪ್ರೇ ಮಾಡಿ
ಆದಷ್ಟು ಅಡುಗೆ ಮನೆಯನ್ನು ಕ್ಲೀನ್ ಆಗಿ ಆಹಾರ ವಸ್ತುಗಳನ್ನು ಮುಚ್ಚಿಟ್ಟರೆ ನೊಣ ಬರುವುದನ್ನು ತಡೆಯಬಹುದು