ಉಸಿರಾಟದ ಸಮಸ್ಯೆ ದೂರವಾಗಿಸಲು ಯೋಗಾಸನ ತುಂಬಾ ಪ್ರಯೋಜನಾಕಾರಿ

ಯೋಗಾಭ್ಯಾಸಗಳು ಉಸಿರಾಟದ ಸಮಸ್ಯೆಯನ್ನು ದೂರ ಮಾಡುತ್ತದೆ. ಮಂತ್ರ, ಕ್ರಿಯಾ ಯೋಗ ಮತ್ತು ಧ್ಯಾನ, ದೇಹದಾದ್ಯಂತ ಸಮಾನಾಂತರ ಜಾಗರೂಕತೆಯನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ ಮನಸ್ಸಿನಲ್ಲಿ ನೆಮ್ಮದಿ ಉಂಟಾಗುತ್ತದೆ. ಸಂತೋಷ, ಶಾಂತಿ ಮತ್ತು ಸಾಮರಸ್ಯದ ಆಲೋಚನೆಗಳು ಮತ್ತು ಭಾವನೆಗಳು ಸಿರೊಟೋನಿನ್, ಮೆಲಟೋನಿನ್ ಮತ್ತು ಡೋಪಮೈನ್ನಂತಹ ಅಂಶಗಳನ್ನು ದೇಹದಲ್ಲಿ ಬಿಡುಗಡೆ ಮಾಡುತ್ತವೆ. ಅದಕ್ಕಾಗಿ ಯೋಗವೂ ಬಹಳ ಮುಖ್ಯ

photo credit social media

ಯೋಗ ಅಭ್ಯಾಸಗಳು ದೇಹದಲ್ಲಿ ಬದಲಾವಣೆಯನ್ನು ತರುತ್ತವೆ. ಇದು ನರಮಂಡಲ, ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಬೆನ್ನುಹುರಿ ಸಮಸ್ಯೆಯನ್ನು ದೂರ ಮಾಡುತ್ತದೆ. ಯೋಗಾಸನದಿಂದ ಹೊಸ ಯೋಚನೆಗಳು ಹುಟ್ಟುತ್ತವೆ ಅಂತಾರೆ ವೈದ್ಯರು.

ಸಮಗ್ರ ಅರಿವು ಮತ್ತು ವರ್ಧಿತ ಸಂವೇದನಾ ಪ್ರತಿಕ್ರಿಯೆಗೆ ಯೋಗ ದಾರಿ ಮಾಡಿಕೊಡುತ್ತದೆ. ತೀವ್ರತರವಾದ ಮಾನಸಿಕ ಕಾಯಿಲೆಗಳಿಗೆ ಯೋಗ ಮತ್ತು ಸಾವಧಾನತೆಯ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ.

ನಕಾರಾತ್ಮಕ ಆಲೋಚನೆಗಳು ಯೋಗಾಸನದಿಂದ ದೂರವಾಗುತ್ತದೆ. ಆರೋಗ್ಯವೂ ವೃದ್ಧಿಯಾಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಯೋಗ ಮತ್ತು ಸಾವಧಾನತೆಯ ಮೂಲಕ ಪಡೆದ ಸಂಪೂರ್ಣ ಸಂತೋಷದ ಪರಿಕಲ್ಪನೆ, ದೇಹದಿಂದ ಉತ್ತಮ ಅಂಶಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಅನುವಂಶಿಕಾ ತೊಂದರೆ, ಒಬ್ಬರ ಪ್ರತಿಕೂಲವಾದ ಮಾನಸಿಕ ಸಮಸ್ಯೆಗೆ ಯೋಗ ಪರಿಹಾರ. ಅರ್ಧ ಗಂಟೆಗಳ ಯೋಗ ಮಾಡಿದರೆ ನಿಮ್ಮ ಇಡೀ ದಿನವನ್ನು ಸಂತೋಷವಾಗಿ ಇಡಬಹುದು.

ಸಂತೋಷ, ಶಾಂತಿ ಮತ್ತು ಸಾಮರಸ್ಯದ ಆಲೋಚನೆಗಳು ಮತ್ತು ಭಾವನೆಗಳು ಸಿರೊಟೋನಿನ್, ಮೆಲಟೋನಿನ್ ಮತ್ತು ಡೋಪಮೈನ್ನಂತಹ ಅಂಶಗಳನ್ನು ದೇಹದಲ್ಲಿ ಬಿಡುಗಡೆ ಮಾಡುತ್ತವೆ. ಅದಕ್ಕಾಗಿ ಯೋಗವೂ ಬಹಳ ಮುಖ್ಯ

ಅನುವಂಶಿಕ ಪ್ರವೃತ್ತಿ, ರೋಗಗಳು, ಆಘಾತಕಾರಿ ಅನುಭವಗಳಿಂದ ಉಲ್ಬಣಗೊಂಡಾಗ ಅದು ತೀವ್ರ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮಾನಸಿಕ ಅಸ್ವಸ್ಥತೆಯ ದಿನವೂ ಕಾಡಿ ಎಷ್ಟೋ ಮಂದಿ ಖಿನ್ನತೆಗೆ ಜಾರುತ್ತದೆ. ಇದೆಲ್ಲದವನ್ನು ನಿವಾರಿಗೆ ಯೋಗ ಕಾರಣವಾಗುತ್ತದೆ.

ನೈಜ ಸೌಂದರ್ಯಕ್ಕಾಗಿ ನಿಸರ್ಗದ ಉತ್ಪನ್ನಗಳ ಮೊರೆ ಸೂಕ್ತ

Follow Us on :-