ನೈಜ ಸೌಂದರ್ಯಕ್ಕಾಗಿ ನಿಸರ್ಗದ ಉತ್ಪನ್ನಗಳ ಮೊರೆ ಸೂಕ್ತ

ನಿಸರ್ಗದ ಮಡಿಲಲ್ಲಿ ಬೆಚ್ಚಗೆ ಬದುಕುತ್ತಿರುವ ನಾವು ನಮ್ಮ ನೈಜ ಸೌಂದರ್ಯವನ್ನು ಕೊನೆವರೆಗೂ ಕಾಪಾಡಿಕೊಳ್ಳಲು ನಿಸರ್ಗದ ಉತ್ಪನ್ನಗಳ ಮೊರೆ ಹೋಗುವುದನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ. ಹಲವಾರು ಕಂಪನಿಗಳ ರಾಸಾಯನಿಕಯುಕ್ತ ಫೇಸ್ ವಾಶ್, ಫೇಸ್ ಕ್ರೀಮ್ ಖರೀದಿಯ ಮೂಲಕ ಕೇವಲ ತಾತ್ಕಾಲಿಕ ಸೌಂದರ್ಯ ಸುಖವಷ್ಟನ್ನೇ ಅನುಭವಿಸುತ್ತಿದ್ದೇವೆ. ಆದರೆ ನಿಸರ್ಗದ ಉತ್ಪನ್ನಗಳ ಬಳಕೆಗೆ ಇನ್ನು ಮುಂದೆಯಾದರೂ ಒತ್ತು ನೀಡಬೇಕಷ್ಟೆ.

photo credit social media

ಸುಂದರವಾಗಿ ಕಾಣುವುದು ನಮ್ಮ ಹಕ್ಕು. ಮುಖ ನಮ್ಮ ಸೌಂದರ್ಯದ ಪ್ರತಿರೂಪ ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ನಮ್ಮ ನೈಜ ಸೌಂದರ್ಯವನ್ನು ಬಿಂಬಿಸುವ ಮುಖದ ಕಾಂತಿ ಮತ್ತು ಹೊಳಪನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಈಗಿನ ಆಧುನಿಕ ಯುಗದಲ್ಲಿ ಸೌಂದರ್ಯವನ್ನು ಉತ್ತೇಜಿಸುವ ಹಲವಾರು ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ತಲೆಯೆತ್ತಿವೆ.

ಸೌಂದರ್ಯದ ಪ್ರದರ್ಶನಕ್ಕೆ ಅಡ್ಡ ಬರುತ್ತಿರುವ ಯಾವುದೇ ಕಪ್ಪು ಕಲೆಗಳು, ಸುಕ್ಕು ಮತ್ತು ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತವೆ. ಆದರೆ ಒಂದು ನೆನಪಿನಲ್ಲಿಡಬೇಕಾದ ವಿಷಯವೆಂದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಯಾವುದೇ ಸೌಂದರ್ಯ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳಿಂದ ತುಂಬಿವೆ.

ಇದಕ್ಕೆ ಪೂರಕವೆಂಬಂತೆ ಅನೇಕ ನೈಸರ್ಗಿಕ ಉತ್ಪನ್ನಗಳೂ ಕೂಡ ಮಾರುಕಟ್ಟೆಯಲ್ಲಿ ಬಂದು ನಿಂತಿವೆ. ಪ್ರಪಂಚದ ವಿವಿಧ ವೈವಿಧ್ಯಮಯ ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿನ ಸ್ಥಳೀಯ ಪದಾರ್ಥಗಳನ್ನು ಬಳಸಿ ಅದ್ಭುತ ಮತ್ತು ಅತ್ಯಂತ ಪರಿಣಾಮಕಾರಿಯಾದ ಬ್ಯೂಟಿ ಪ್ರಾಡಕ್ಟ್ ಗಳನ್ನು ತಯಾರು ಮಾಡಿದ್ದಾರೆ. ಆದರೆ ಇವುಗಳಿಗೆ ಹೆಚ್ಚಿನ ಸಮಯ ಮತ್ತು ಶ್ರಮ ಬೇಕಾಗುತ್ತದೆ.

ನಿಮ್ಮ ನೈಜ ಸೌಂದರ್ಯ ಮರೆಮಾಚುತ್ತದೆ. ನಿಮ್ಮ ಮೂಲ ಸೌಂದರ್ಯವನ್ನು ಮತ್ತು ಮುಖದ ಹೊಳಪನ್ನು ಪ್ರದರ್ಶಿಸಬೇಕಾದರೆ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ಇವುಗಳು ನೈಸರ್ಗಿಕವಾಗಿ ನಿಮ್ಮನ್ನು ಸುಂದರವಾಗಿ ಕಾಣಲು ಸಹಾಯ ಮಾಡುತ್ತವೆ. ಕೇವಲ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಸಣ್ಣ ಬದಲಾವಣೆಗಳು ಆಗಬೇಕಷ್ಟೇ. ನಿಮ್ಮ ಹೊಸ ರೀತಿಯ ಸೌಂದರ್ಯ ನಿಮ್ಮನ್ನೇ ಬೆರಗು ಮಾಡುತ್ತದೆ.

ಕರಿದ ತಿಂಡಿಗಳು, ಸಂಸ್ಕರಿಸಿದ ಆಹಾರಗಳು ಮತ್ತು ಆಮ್ಲಿಯ ಆಹಾರ ಪದಾರ್ಥಗಳು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸದಾ ಪೌಷ್ಟಿಕತೆ ತುಂಬಿರುವ ಆಹಾರಗಳ ಸೇವನೆಗೆ ಒತ್ತು ಕೊಡಬೇಕು. ಸಸ್ಯಾಹಾರಿ ಆಹಾರಗಳು ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಬಹಳ ಸಹಕಾರಿ.

ಜೊತೆಗೆ ಆರೋಗ್ಯಕರ ಕೂದಲು ಸಹ ನಿಮ್ಮದಾಗುತ್ತದೆ. ಆದ್ದರಿಂದ ನಿಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಆದಷ್ಟು ಹೆಚ್ಚಿನ ತರಕಾರಿಗಳನ್ನು ಜೊತೆಗೆ ಹಣ್ಣುಗಳನ್ನು ಬಳಕೆ ಮಾಡಿ. ಹಸಿರು ಎಲೆ - ತರಕಾರಿಗಳ ಮಹತ್ವವನ್ನು ಮರೆಯಬೇಡಿ. ಹಲವಾರು ದ್ವಿದಳ ಧಾನ್ಯಗಳು, ಕಾಳುಗಳು, ಬೀಜಗಳು ನಿಮ್ಮ ಆಹಾರದಲ್ಲಿ ಸೇರಿರಲಿ.

ಪ್ರಪಂಚದ ವಿವಿಧ ವೈವಿಧ್ಯಮಯ ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿನ ಸ್ಥಳೀಯ ಪದಾರ್ಥಗಳನ್ನು ಬಳಸಿ ಅದ್ಭುತ ಮತ್ತು ಅತ್ಯಂತ ಪರಿಣಾಮಕಾರಿಯಾದ ಬ್ಯೂಟಿ ಪ್ರಾಡಕ್ಟ್ ಗಳನ್ನು ತಯಾರು ಮಾಡಿದ್ದಾರೆ.

ಸಾಮಾನ್ಯ ಜ್ವರ ಮತ್ತು ಶೀತ ಗುಣಪಡಿಸಲು ಸೂಪ್ ಸೂಪರ್

Follow Us on :-