ನಾವು ಕಾಫಿ ಕುಡಿಯುವುದು ನೋಡಿ ಚಿಕ್ಕ ಮಕ್ಕಳು ನಮಗೂ ಕೊಡು ಎಂದು ಕೇಳುವುದು ಸಹಜ. ಹಾಗಂತ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕೆಫೈನ್ ಅಂಶವಿರುವ ಕಾಫಿ ಕೊಡುವುದು ಒಳ್ಳೆಯದಲ್ಲ. ಯಾವ ವಯಸ್ಸಿಗೆ ಕೊಡಬಹುದು ನೋಡಿ.
Photo Credit: Instagram, Facebook
ಕಾಫಿಯಲ್ಲಿ ಕೆಫೈನ್ ಅಂಶ ಅಧಿಕವಾಗಿದ್ದು, ಇದು ಮಕ್ಕಳ ಬೆಳವಣಿಗೆಗೆ ಒಳ್ಳೆಯದಲ್ಲ
ಮಕ್ಕಳ ಬೆಳವಣಿಗೆಯ ಹಾರ್ಮೋನ್ ಮೇಲೆ ಕೆಫೈನ್ ಅಂಶ ಪರಿಣಾಮ ಬೀರಬಹುದು
ಹೀಗಾಗಿ 5 ವರ್ಷದೊಳಗಿನ ಮಕ್ಕಳಿಗೆ ಕಾಫಿ ಕೊಡುವುದು ಖಂಡಿತಾ ಒಳ್ಳೆಯದಲ್ಲ
ತಜ್ಞರ ಪ್ರಕಾರ 11 ವರ್ಷದವರೆಗೆ ಮಕ್ಕಳಿಗೆ ಕೆಫೈನ್ ಅಂಶವಿರುವ ಪಾನೀಯ ನೀಡಬಾರದು
ಬೆಳವಣಿಗೆಯ ಹಂತದಲ್ಲಿ 100 ಮಿ.ಗ್ರಾಂಗಿಂತ ಹೆಚ್ಚು ಕೆಫೈನ್ ಅಂಶ ಸೇವನೆ ಮಾಡಬಾರದು
5 ರಿಂದ ಆರು ವರ್ಷ ದಾಟಿದ ಮಕ್ಕಳಿಗೆ ಕಡಿಮೆ ಸ್ಟ್ರಾಂಗ್ ಇರುವ ಒಂದು ಕಪ್ ಕಾಫಿ ಮಾತ್ರ ನೀಡಬಹುದು
18 ವರ್ಷದವರೆಗೂ ಬೆಳವಣಿಗೆಯ ಹಂತವಾಗಿದ್ದು ಕೆಫೈನ್ ಅಂಶ ಕಡಿಮೆ ಮಾಡಿದಷ್ಟು ಆರೋಗ್ಯಕ್ಕೆ ಉತ್ತಮ