ಫಿಶರ್ ಆದಾಗ ಏನು ಮಾಡಬಹುದು

ಗುದದ್ವಾರದಲ್ಲಿ ಮಲವಿಸರ್ಜಿಸುವಾಗ ನೋವು, ರಕ್ತಸ್ರಾವವಾಗುವುದು ಇತ್ಯಾದಿ ಫಿಶರ್ ನ ಲಕ್ಷಣಗಳು. ಗುದದ್ವಾರದಲ್ಲಿ ಅತಿಯಾಗಿ ಒತ್ತಡವುಂಟಾದಾಗ ಬಿರುಕುಳಾಗವುದರಿಂದ ಫಿಶರ್ ಆಗಬಹುದು. ಇದಕ್ಕೆ ಮನೆ ಮದ್ದು ಏನು ನೋಡೋಣ.

credit: social media

ತುಂಬಾ ಹೊತ್ತು ಟಾಯ್ಲೆಟ್ ನಲ್ಲಿ ಕೂರುವುದನ್ನು ತಪ್ಪಿಸಿ, ಗುದದ್ವಾರದ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಿ

ಪ್ರತಿ ನಿತ್ಯ ಸ್ನಾನದ ವೇಳೆ 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕೂರುವುದನ್ನು ಅಭ್ಯಾಸ ಮಾಡಿಕೊಳ್ಳಿ

ಮಲವಿಸರ್ಜನೆಗೆ ಅವಸರವಾಗದೇ ಇದ್ದಾಗಲೂ ಬಲವಂತವಾಗಿ ವಿಸರ್ಜಿಸಲು ಹೋಗಬೇಡಿ

ಫಿಶರ್ ಸಮಸ್ಯೆ ಬಾರದಂತೆ ತಡೆಯಲು ಪ್ರತಿ ನಿತ್ಯ 8 ಗ್ಲಾಸ್ ಗಳಷ್ಟು ನೀರು ಕುಡಿಯುವುದು ಅಗತ್ಯ

ಮಲ ವಿಸರ್ಜನೆಗೆ ಸುಗಮವಾಗಲು ಆಹಾರದಲ್ಲಿ ಸಾಕಷ್ಟು ಫೈಬರ್ ಅಂಶವನ್ನು ಒಳಗೊಳ್ಳಿಸುವುದು ಉತ್ತಮ

ತುಂಬಾ ಹೊತ್ತು ಕೂತು ಕೆಲಸ ಮಾಡುವ ಅನಿವಾರ್ಯತೆಯಿದ್ದರೆ ದಿನದಲ್ಲಿ ಅರ್ಧಗಂಟೆ ವಾಕಿಂಗ್ ಮಾಡಿ

ಫಿಶರ್ ನೋವಿನ ಜೊತೆ ರಕ್ತಸ್ರಾವವಾಗುತ್ತಿದ್ದರೆ ತಡಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ

ದಿನವಿಡೀ ಕಾಜಲ್ ಬಳಸುವುದರ ಅಡ್ಡಪರಿಣಾಮಗಳು

Follow Us on :-