ಇನ್ನೇನು ದೀಪಾವಳಿ ಹತ್ತಿರ ಬರುತ್ತಿದ್ದು ಪಟಾಕಿ ಹೊಡೆಯಲೂ ತಯಾರಾಗಿರುತ್ತೀರಿ. ಆದರೆ ಪಟಾಕಿ ಮನಸ್ಸಿಗೆ ಖುಷಿ ಕೊಟ್ಟರೂ ಕೆಲವೊಮ್ಮೆ ಇದರಿಂದ ಕಣ್ಣಿಗೆ ಹಾನಿಯಾಗುವುದು ಇದೆ. ಪಟಾಕಿ ಕಣ್ಣಿಗೆ ಬಿದ್ದ ತಕ್ಷಣ ಏನು ಮಾಡಬೇಕು ಇಲ್ಲಿದೆ ಟಿಪ್ಸ್.
Photo Credit: Instagram, Twitter
ಪಟಾಕಿಯಲ್ಲಿರುವ ರಾಸಾಯನಿಕನಿಂದ ಕಣ್ಣಿನ ದೃಷ್ಟಿಯೇ ಹೋಗಬಹುದು
ಪಟಾಕಿ ಕಣ್ಣಿಗೆ ಬಿದ್ದ ತಕ್ಷಣ ಶುದ್ಧವಾದ ಕೈಯಿಂದ ಮೊದಲು ಕಣ್ಣಿಗೆ ನೀರು ಹಾಕಿ
ಬಳಿಕ ಹದ ಬಿಸಿ ನೀರಿನಿಂದ ಕಣ್ಣನ್ನು ಸುಮಾರು 20 ನಿಮಿಷಗಳ ಕಾಲ ತೊಳೆಯುತ್ತಿರಿ
ಕಣ್ಣಿಗೆ ಬಿಸಿ ನೀರಿನ ಆವಿ ತೆಗೆದುಕೊಂಡು ತೇವಾಂಶ ಸಿಗುವಂತೆ ನೋಡಿಕೊಳ್ಳಬೇಕು
ಯಾವುದೇ ಕಾರಣಕ್ಕೂ ಕಣ್ಣು ಉಜ್ಜಿಕೊಳ್ಳುವ ಅಥವಾ ಒತ್ತಡ ಹಾಕಬೇಡಿ
ಕಣ್ಣಿಗೆ ಯಾವುದಾದರೂ ಕಸ ಅಂಟಿಕೊಂಡಿದ್ದರೆ ಎಳೆಯುವ ಪ್ರಯತ್ನ ಮಾಡಬೇಡಿ
ಪ್ರಥಮ ಚಿಕಿತ್ಸೆಯ ನಂತರ ತಕ್ಷಣವ ಕಣ್ಣಿನ ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ