ತುಕ್ಕು ಹಿಡಿದ ಚಾಕು ಸರಿಪಡಿಸುವುದು ಹೇಗೆ

ಅಡುಗೆ ಮನೆಯಲ್ಲಿ ಕೆಲವು ದಿನ ಬಳಸದೇ ಹಾಗೇ ಬಿಟ್ಟ ಚಾಕು ಅಥವಾ ಚೂರಿಯಂತಹ ಕಬ್ಬಿಣದ ವಸ್ತುಗಳು ಅಲ್ಲಿಗೇ ತುಕ್ಕು ಹಿಡಿದು ಉಪಯೋಗಿಸಲು ಸಾಧ್ಯವಾಗದಂತಾಗುತ್ತದೆ. ತುಕ್ಕು ಹಿಡಿದ ಚಾಕು ಸರಿಪಡಿಸುವುದು ಹೇಗೆ ನೋಡಿ.

Photo Credit: Instagram

ಚಾಕುವನ್ನು ತುಂಬಾ ಸಮಯದವರೆಗೆ ಉಪಯೋಗಿಸದೇ ಇದ್ದರೆ ತುಕ್ಕು ಹಿಡಿಯಬಹುದು

ಚಾಕು ತೊಳೆದ ನಂತರ ನೀರು ಸರಿಯಾಗಿ ಒರೆಸದೇ ಹಾಗೇ ಇಟ್ಟಲ್ಲಿ ತುಕ್ಕು ಹಿಡಿಯಬಹುದು

ಚಾಕು ಉಪಯೋಗಿಸಿದ ಬಳಿಕ ತೊಳೆದು ಟಿಶ್ಯೂ ಅಥವಾ ಬಟ್ಟೆಯಿಂದ ನೀರು ಒರೆಸಿಡಿ

ನಿತ್ಯವೂ ಬಳಸುವ ಚಾಕುವಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿಟ್ಟರೆ ಅದು ತುಕ್ಕಾಗದು

ಆಲೂಗಡ್ಡೆಯ ಹೋಳಿನಿಂದ ಚಾಕು ಮಸಾಜ್ ಮಾಡಿದರೆ ತುಕ್ಕು ಬಾರದು

ಬೇಕಿಂಗ್ ಸೋಡಾ ಪೇಸ್ಟ್ ನ್ನು ಚಾಕುವಿಗೆ ಹಾಕಿ ತೊಳೆದರೆ ತುಕ್ಕು ಹೋಗುತ್ತದೆ

ಕೆಲವು ಹೊತ್ತು ವಿನೇಗರ್ ದ್ರಾವಣದಲ್ಲಿ ಚಾಕು ಮುಳುಗಿಸಿಟ್ಟರೆ ತುಕ್ಕು ಮಾಯವಾಗುತ್ತದೆ

ಮಧುಮೇಹಿಗಳಿಗೆ ತೂಕ ಇಳಿಸಲು ಇಲ್ಲಿದೆ ಬೆಸ್ಟ್ ಉಪಾಯ

Follow Us on :-