ಚಂಡೀಪುರ ವೈರಸ್ ಲಕ್ಷಣಗಳನ್ನು ತಿಳಿದುಕೊಳ್ಳಿ

ಇತ್ತೀಚೆಗೆ ಡೆಂಗ್ಯೂ, ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮತ್ತೊಂದು ಮಾರಕ ಜ್ವರ ಕಾಲಿಟ್ಟಿದೆ. ಇದರ ಹೆಸರು ಚಂಡೀಪುರ ವೈರಸ್ ಜ್ವರ. ಗುಜರಾತ್ ನಲ್ಲಿ ಈಗಾಗಲೇ ಮಕ್ಕಳು ಇದರಿಂದ ಸಾವನ್ನಪ್ಪಿದ್ದಾರೆ. ಇದು ಹರಡಲು ಕಾರಣಗಳೇನು, ಇದರ ಲಕ್ಷಣಗಳೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Photo Credit: Social Media

ಮುಖ್ಯವಾಗಿ 9 ರಿಂದ 14 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುವ ವೈರಸ್ ಇದಾಗಿದೆ.

ಸೊಳ್ಳೆಗಳು ಅಥವಾ ಮರಳು ನೊಣಗಳ ಕಡಿತದಿಂದ ಈ ವೈರಸ್ ಹರಡುತ್ತವೆ

ಹೀಗಾಗಿ ಸೊಳ್ಳೆ ಅಥವಾ ಮರಳು ನೊಣಗಳು ಕಡಿಯದಂತೆ ಎಚ್ಚರಿಕೆ ವಹಿಸುವುದು ಸೂಕ್ತ

ವಿಪರೀತ ಜ್ವರ, ತಲೆನೋವು, ವಾಂತಿ, ರಕ್ತಸ್ರಾವವಾಗುವುದು, ಅತಿಸಾರ ಇದರ ಲಕ್ಷಣಗಳು

ದೈಹಿಕ ಮಾತ್ರವಲ್ಲ, ಮಾನಸಿಕವಾಗಿಯೂ ಗೊಂದಲ, ದಿಗ್ಬ್ರಮೆ ಉಂಟುಮಾಡಬಹುದು

ಸದ್ಯಕ್ಕೆ ಇದಕ್ಕೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಆಂಟಿ ಬಯೋಟಿಕ್ ನ್ನು ಕಂಡುಹಿಡಿಯಲಾಗಿಲ್ಲ

ಹೀಗಾಗಿ ಇಂತಹ ಲಕ್ಷಣ ಕಂಡುಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ಟೊಮೆಟೊ ಕೆಡದಂತೆ ಸಂರಕ್ಷಿಸಲು ಈ ಟ್ರಿಕ್ಸ್ ಬಳಸಿ

Follow Us on :-