ಟೊಮೆಟೊ ಕೆಡದಂತೆ ಸಂರಕ್ಷಿಸಲು ಈ ಟ್ರಿಕ್ಸ್ ಬಳಸಿ

ಟೊಮೆಟೊ ತಂದು ನಾಲ್ಕೇ ದಿನಗಳಲ್ಲಿ ಕೊಳೆತು ಹೋಗುತ್ತಿದೆ ಎಂಬ ಚಿಂತೆಯೇ? ಟೊಮೆಟೊವನ್ನು ವಾರದವರೆಗೂ ಹಾಳಾಗದಂತೆ ಸಂರಕ್ಷಿಸಿಡಲು ಉಪಾಯಗಳಿವೆ. ಟೊಮೆಟೊ ಹಾಳಾಗದಂತೆ ಸಂರಕ್ಷಿಸಲು ಏನು ಉಪಾಯವಿದೆ ನೋಡೋಣ.

Photo Credit: Social Media

ಟೊಮೆಟೊವನ್ನು ಮಾರುಕಟ್ಟೆಯಿಂದ ತಂದ ತಕ್ಷಣ ಉಪ್ಪು ಮತ್ತು ಅರಸಿನ ಬೆರೆಸಿದ ನೀರಿನಲ್ಲಿ ನೆನೆಸಿಡಿ

ಕೆಲವು ನಿಮಿಷದ ನಂತರ ಈ ಟೊಮೆಟೊವನ್ನು ಹೊರತೆಗೆದು ಒಣ ಬಟ್ಟೆಯಿಂದ ನೀರು ಒರೆಸಿಕೊಳ್ಳಿ

ಒಂದು ಪೇಪರ್ ಬಳಸಿಕೊಂಡು ಪ್ರತಿಯೊಂದು ಟೊಮೆಟೊವನ್ನು ಪ್ರತ್ಯೇಕವಾಗಿ ಕಟ್ಟಿಡಿ

ಇದನ್ನು ಒಂದು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ತರಕಾರಿ ಇಡುವ ಜಾಗದಲ್ಲಿ ಇರಿಸಿ

ನಾಲ್ಕೈದು ದಿನಗಳ ನಂತರ ನೋಡಿದಾಗ ಟೊಮೆಟೊ ಕೊಂಚ ಹಣ್ಣಾಗಿದ್ದರೆ ಫ್ರೀಝರ್ ನಲ್ಲಿಡಿ

ಮೆತ್ತಗಾದ ಟೊಮೆಟೊವನ್ನು ಫ್ರೀಝರ್ ನಲ್ಲಿಡುವುದರಿಂದ ಬೇಗನೇ ಹಾಳಾಗುವುದಿಲ್ಲ.

ಈ ರೀತಿ ಟೊಮೆಟೊ ಸಂರಕ್ಷಿಸಿದರೆ ವಾರದವರೆಗೂ ಹಾಳಾಗದಂತೆ ಇಟ್ಟುಕೊಳ್ಳಬಹುದು

ತೆಂಗಿನ ಚಿಪ್ಪಿನಲ್ಲಿದೆ ಆರೋಗ್ಯಕರ ಉಪಯೋಗಗಳು

Follow Us on :-