ಮಾನಸಿಕ ಒತ್ತಡ , ಖಿನ್ನತೆಯ ಭಾವನೆ ನಿವಾರಣೆಗೆ ಪುದೀನಾ ಬಳಸಿ

ಪುದೀನದಲ್ಲಿ ಇರುವ ಔಷಧೀಯ ಗುಣ ಹಾಗೂ ಅದರ ಪರಿಮಳವು ಅರೋಮಾ ಥೆರಪಿಗಳಿಗೆ ಸಹಾಯ ಮಾಡುವುದು. ಪುದೀನ ಉಲ್ಲಾಸಕರವಾದ ವಾಸನೆಯನ್ನು ಒಳಗೊಂಡಿರುವುದರಿಂದ ಅದು ಬಹು ಬೇಗ ಶಾಂತ ಹಾಗೂ ಉಲ್ಲಾಸದ ಭಾವನೆಯನ್ನು ನೀಡುತ್ತವೆ. ಪುದೀನದ ರಸ ಮತ್ತು ಅದರ ಪರಿಮಳವು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವುದು. ರಕ್ತದಲ್ಲಿ ಸಿರೋಟಿನ್ ಅನ್ನು ತಕ್ಷಣ ಬಿಡುಗಡೆಮಾಡುವುದು. ಆಗ ಒತ್ತಡ ಹಾಗೂ ಖಿನ್ನತೆಯು ಸರಾಗವಾಗಿ ನಿವಾರಣೆಯಾಗುವುದು.

photo credit social media

ಪುದೀನಾ ಸೊಪ್ಪನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು. ಚರ್ಮದ ಆರೋಗ್ಯ ಸುಧಾರಿಸುವುದು. ಇಷ್ಟೇ ಅಲ್ಲದೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳನ್ನು ಸಲಭವಾಗಿ ನಿವಾರಿಸಬಹುದು

ಆಯುರ್ವೇದ ಮತ್ತು ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುವುದು. . ಪುದೀನ ಬಳಸುವುದರ ಮೂಲಕ ಯಾವೆಲ್ಲಾ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಪುದೀನದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯಂಟ್‍ಗಳಿವೆ. ಇವು ಕಿಣ್ವಗಳಿಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ಪುದೀನದಲ್ಲಿ ಇರುವ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಪರಿಣಾಮಗಳನ್ನು ಹೊಂದಿರುತ್ತವೆ. ಅವು ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತದೆ. ಆಮ್ಲೀಯತೆ ಮತ್ತು ವಾಯುವನ್ನು ಹಿಡಿತದಲ್ಲಿ ಇಡಲು ಸಹಾಯ ಮಾಡುವುದು.

ನಿಯಮಿತವಾಗಿ ಪುದೀನ ರಸ ಅಥವಾ ಪುದೀನ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಎದೆಯ ದಟ್ಟಣೆ ಕಡಿಮೆಯಾಗುತ್ತದೆ. ಪುದೀನದಲ್ಲಿ ಇರುವ ಮೆಂಥಾಲ್ ಡಿಕೊಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಡುತ್ತದೆ. ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಸಹಾಯ ಗುವಂತೆ ಮಾಡುವುದು. ಪುದೀನವನ್ನು ಮಿತಿ ಮೀರಿ ಸೇವಿಸಬಾರದು. ಮಿತವಾಗಿ ಬಳಸಿದಾಗ ಸಮಸ್ಯೆಯನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಣದಲ್ಲಿ ಇಡಬಹುದು.

ಪುದೀನದಲ್ಲಿ ಇರುವ ಮೆಂಥಾಲ್ ಅಂಶವು ಸ್ನಾಯುಗಳನ್ನು ಸಡಿಲಗೊಳಿಸಿ, ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನ ರಸವನ್ನು ಹಣೆಯ ಮೇಲೆ ಅನ್ವಯಿಸಿಕೊಂಡರೆ ತಲೆನೋವು ನಿವಾರಣೆಯಾಗುವುದು. ತಲೆನೋವು ನಿವಾರಣೆಗೆ ಪುದೀನವನ್ನು ಬಳಸಿ ತಯಾರಿಸಲಾದ ಮುಲಾಮು ಅಥವಾ ಎಣ್ಣೆಯನ್ನು ಸಹ ಹಣೆ ಮತ್ತು ಪೀಡಿತ ಪ್ರದೇಶದಲ್ಲಿ ಅನ್ವಯಿಸಿಕೊಳ್ಳಬಹುದು. ಉತ್ತಮವಾದ ಫಲಿತಾಂಶ ನೀಡುವುದು.

ಪುದೀನ ಎಲೆಯನ್ನು ಅಗಿಯುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು. ಪುದೀನದಲ್ಲಿನ ಸಾರಭೂತ ತೈಲಗಳು ತಾಜಾತನದ ಉಸಿರಾಟವನ್ನು ಪಡೆಯಲು ಸಹಾಯವಾಗುತ್ತದೆ. ಪುದೀನ ಎಣ್ಣೆಯನ್ನು ಹೊಂದಿರುವ ಮೌತ್‍ವಾಶ್‍ವನ್ನು ಬಳಸುವುದರಿಂದ ಬಾಯಿಗೆ ಸಂಬಂಧಿಸಿದ ಅನಾರೋಗ್ಯಗಳನ್ನು ಸುಧಾರಿಸಲು ಸಹಾಯವಾಗುವುದು. ಬ್ಯಾಕ್ಟೀರಿಯಾ ಕೊಲ್ಲಲು, ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಹೊಂದಲು ಸಹಾಯವಾಗುತ್ತದೆ.

ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಪುದೀನ ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಮಿದುಳಿನ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ಪುದೀನವನ್ನು ನಿಯಮಿತವಾಗಿ ಸೇವಿಸುವಾಗ ಮಿತವಾಗಿ ಹಾಗೂ ಹಿತವಾಗಿ ಸೇವಿಸಬೇಕು. ಆಗ ಮಿದುಳಿನ ಆರೋಗ್ಯ ಉತ್ತಮವಾಗಿ ಸುಧಾರಿಸುತ್ತದೆ.

ಹಿಮೋಗ್ಲೋಬಿನ್ ಕಡಿಮೆ, ಕೊರತೆಯಾದಲ್ಲಿ ಹೀಗೆ ಮಾಡಿ

Follow Us on :-