ದೇಹದಲ್ಲಿ ರಕ್ತದ ಕೊರತೆ ಇದ್ದಾಗ ರಕ್ತಹೀನತೆ ಸಮಸ್ಯೆ ಕಂಡು ಬರುತ್ತದೆ. ಈ ರಕ್ತಹೀನತೆ ಸಮಸ್ಯೆ ಉಂಟಾದಾಗ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಅಥವಾ ಕೊರತೆ ಉಂಟಾಗುತ್ತದೆ. ಹಾಗೂ ಕೆಂಪು ರಕ್ತ ಕಣಗಳು ಕಡಿಮೆ ಆಗಲು ಶುರುವಾಗುತ್ತದೆ. ಹೀಗಾಗಿ ಸ್ವಲ್ಪ ಕೆಲಸ ಮಾಡಿದರೂ, ನಡೆದರೂ ಸುಸ್ತಾಗುವುದು, ದಣಿವು, ತಲೆನೋವು, ಎದೆನೋವು, ತಲೆಸುತ್ತು, ಕೈಕಾಲು ನಡುಗುವುದು, ತಣ್ಣಗಾಗುವುದು, ಮರಗಟ್ಟುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
photo credit social media