ಕೆಲವರಿಗೆ ವೆಜಿಟೇಬಲ್ ಸೂಪ್ ಎಂದರೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಚಿಕನ್ ಸೂಪ್ ಎಂದರೆ ಪ್ರಾಣ. ಆದರೆ ಯಾರು ಸಹ ಇದನ್ನು ಪ್ರತಿ ದಿನ ತಯಾರು ಮಾಡಿ ಕುಡಿಯುವುದಿಲ್ಲ. ಆದರೆ ಆರೋಗ್ಯ ತಜ್ಞರು ಹೇಳುವುದು ಏನೆಂದರೆ ಪ್ರತಿದಿನ ಒಂದೊಂದು ಕಪ್ ಸೂಪ್ ತಯಾರು ಮಾಡಿ ಕುಡಿಯಬೇಕು.
photo credit social media
ಇದರಿಂದ ಹೊಟ್ಟೆ ಹಸಿವು ನಿಯಂತ್ರಣ ಆಗುವುದು ಮಾತ್ರವಲ್ಲದೆ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಪ್ರತಿದಿನ ಸೂಪ್ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯದ ಪ್ರಯೋಜನಗಳು
ನಾವು ಸೇವನೆ ಮಾಡುವ ಆಹಾರ ದಲ್ಲಿ ಕಂಡು ಬರುವ ಕ್ಯಾಲೋರಿಗಳನ್ನು ಇದು ಬಹಳ ಚೆನ್ನಾಗಿ ಕರಗಿಸುತ್ತದೆ. ಆದ್ದರಿಂದ ನಮ್ಮ ದೇಹದ ತೂಕದ ಮೇಲೆ ಇದರ ಯಾವುದೇ ಪ್ರಭಾವ ಬೀರುವುದಿಲ್ಲ.
ಸಸ್ಯಹಾರಿಗಳಿಗೆ ತರಕಾರಿಗಳನ್ನು ಬಿಟ್ಟರೆ ಪೌಷ್ಟಿಕ ಸತ್ವಗಳ ಬೇರೆ ಮೂಲ ಇಲ್ಲ. ಹಾಗಾಗಿ ಪ್ರತಿದಿನ ವೆಜಿಟೇಬಲ್ ಸೂಪ್ ತಯಾರು ಮಾಡಿ ಸೇವನೆ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಪೌಷ್ಟಿಕ ಸತ್ವಗಳು ತರಕಾರಿಗಳ ಮೂಲಕ ಸೇರುತ್ತವೆ.
ಹಸಿರೆಲೆ ತರಕಾರಿಗಳು ಕೂಡ ನೀವು ತಯಾರು ಮಾಡುವ ವೆಜಿಟೇಬಲ್ ಸೂಪ್ ನ ಭಾಗವಾಗಿ ಉಳಿದರೆ ಇನ್ನು ಸಹ ಒಳ್ಳೆಯದು.
ಪ್ರತಿದಿನ ನಿಮಗೆ ವೆಜಿಟೇಬಲ್ ಸೂಪ್ ತಯಾರುಮಾಡಿ ಸೇವನೆ ಮಾಡುವ ಅಭ್ಯಾಸ ಇದ್ದರೆ, ಅದು ನಿಮ್ಮ ಮೆದುಳಿನ ಗ್ರಹಿಕೆಗೆ ಒಳಗಾಗಿ ನೀವು ಪ್ರತಿದಿನ ಯಾವ ಪ್ರಮಾಣದಲ್ಲಿ ತರಕಾರಿಗಳನ್ನು ಸೇವನೆ ಮಾಡಬೇಕು ಮತ್ತು ಅತ್ಯುನ್ನತ ಪೌಷ್ಟಿಕ ಸತ್ವಗಳನ್ನು ನಿಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ಸಂಕೇತಗಳ ಮೂಲಕ ಕೊಡುತ್ತದೆ.
ನಿಯಮಿತ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ನಾರಿನ ಅಂಶ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳ ಪ್ರಮಾಣ ಮತ್ತು ಹೆಚ್ಚು ಇನ್ನಿತರ ಆರೋಗ್ಯಕರ ಅಂಶಗಳು ನಿಮ್ಮ ದೇಹ ಸೇರುತ್ತವೆ.
ಮೊದಲೇ ಹೇಳಿದಂತೆ ಎಲ್ಲಾ ಬಗೆಯ ತರಕಾರಿಗಳನ್ನು ಹಾಕಿ ತಯಾರುಮಾಡುವ ವೆಜಿಟೇಬಲ್ ಸೂಪ್ ನಿಮಗೆ ಒಳ್ಳೆಯ ಪೌಷ್ಠಿಕ ಸತ್ವಗಳನ್ನು ಮತ್ತು ಆರೋಗ್ಯಕರವಾದ ಅಂಶಗಳನ್ನು ನೀಡುತ್ತದೆ. ನಿಮ್ಮ ಮಧ್ಯಾಹ್ನದ ಊಟದ ಸಮಯಕ್ಕೆ ಅಥವಾ ರಾತ್ರಿಯ ಊಟದ ಸಮಯದಲ್ಲಿ ಇದನ್ನು ಬಳಕೆ ಮಾಡಬಹುದು.