ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮುಸುಕಿನ ಜೋಳ

ಹಸಿ ಮುಸುಕಿನ ಜೋಳಗಳುನಮ್ಮನ್ನು ಕೈ ಬೀಸಿ ಕರೆಯುತ್ತವೆ. ಬೇಯಿಸಿದ ಮುಸುಕಿನ ಜೋಳ ಕೆಲವರಿಗೆ ಇಷ್ಟವಾದರೆಕೆಂಡದ ಮೇಲೆ ಹುರಿದು ಉಪ್ಪು ಖಾರಸವರಿ ಕೊಡುವ ಮುಸುಕಿನ ಜೋಳಗಳು ಇನ್ನು ಕೆಲವರಿಗೆ ಬಾಯಲ್ಲಿ ನೀರೂರಿಸುತ್ತವೆ. ಸಂಜೆ ಸಮಯಜೋಳ ತಿನ್ನುತ್ತಿದ್ದರೆ ಬಾಯಿಗೆ ಹಿತ, ಮನಸ್ಸಿಗೆ ಖುಷಿ. ಜೋಳ ಕೇವಲ ಬಾಯಿ ರುಚಿಗೆ ಮಾತ್ರ ತಿನ್ನುವಂತದ್ದಲ್ಲ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

photo credit social media

ಮೊದಲಿಗೆ ಫ್ಯಾಟ್ ಅಥವಾ ಕೊಬ್ಬನ್ನು ಕರಗಿಸಲು ಜೋಳ ಸಹಾಯಕಾರಿಯಾಗಿದೆ. ನಮ್ಮ ದೇಹದಲ್ಲಿ ಇರುವಂತಹ ಅನಗತ್ಯ ಅಥವಾ ಅನಾವಶ್ಯಕ ಕೊಬ್ಬನ್ನು ಕರಗಿಸಲುಜೋಳ ಸಹಾಯಕಾರಿಯಾಗಿದೆ ಪ್ರತಿದಿನ ಜೋಳವನ್ನು ಸೇವನೆ ಮಾಡುವುದರಿಂದ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು

ಕಾನ್ಸರ್ ವಿರುದ್ಧ ಹೋರಾಟ: ಜೋಳದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದು ನಮ್ಮ ದೇಹದಲ್ಲಿ ಕ್ಯಾನ್ಸರ್ ರೋಗವನ್ನು ಕಡಿಮೆಮಾಡಿಕೊಳ್ಳಲು ಸಹಾಯಕಾರಿಯಾಗಿದೆ.

ಬ್ರೆಸ್ಟ್ ಮತ್ತು ಲಿವರ್ ನ ಟ್ಯೂಮರ್ ಕಡಿಮೆ ಮಾಡಲು: ಜೋಳದಲ್ಲಿ ಇರುವಂತಹ ಪ್ಯಾರಿಯೋಲಿಕ್ ಆಸಿಡ್ ಬ್ರೆಸ್ಟ್ ಮತ್ತು ಲಿವರ್ ನ ಟ್ಯೂಮರ್ ಅನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ಫ್ರೀ ರಾಡಿಕಲ್ ಇಂದ ಆಗುವಂತಹ ತೊಂದರೆಯಿಂದಲೂ ಸಹ ನಮ್ಮನ್ನು ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು: ಜೋಳದಲ್ಲಿ ವಿಟಮಿನ್ ಸಿ ಬಯೋ ಫ್ಲೇವೊನೈಡ್ಸ್, ಫೈಬರ್ ಅಂಶ ಹೇರಳವಾಗಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ನರಗಳಲ್ಲಿ ಬ್ಲಾಕೆಜ್ ಆಗುವುದನ್ನು ತಡೆಗಟ್ಟುತ್ತದೆ.

ಮೂಳೆಗಳನ್ನು ಬಲಪಡಿಸಲು: ಜೋಳವು ಮೂಳೆಗಳನ್ನು ಬಲಗೊಳಿಸುತ್ತದೆ ಹಾಗೂ ಇದರಲ್ಲಿ ಇರುವಂತಹ ಐರನ್, ಜಿಂಕ್ , ಫಾಸ್ಪರಸ್ , ಮೆಗ್ನೀಷಿಯಂ ಅಂಶಗಳು ಮೂಳೆಗಳ ಸಮಸ್ಯೆಯಿಂದ ದೂರವಿಡುತ್ತದೆ

ಕಣ್ಣಿನ ದೃಷ್ಟಿ ಹೆಚ್ಚಳ: ಜೋಳದಲ್ಲಿ ವಿಟಾ ಕೆರೋಟಿನ್ ಹಾಗೂ ವಿಟಮಿನ್ ಇ ಇದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಕ್ಯಾರೋಟಿನಾಯ್ಡ್ ಅಂಶಗಳು ಕಣ್ಣುಗಳ ಮಧ್ಯ ಭಾಗದ ಕಪ್ಪು ಬಣ್ಣದ ಆಕಾರದಲ್ಲಿ ಪೊರೆ ಉಂಟಾಗದಂತೆ ಎಚ್ಚರ ವಹಿಸುತ್ತವೆ. ಹಾಗಾಗಿ ಕಣ್ಣುಗಳ ದೃಷ್ಟಿ ಎಂದಿಗೂ ಚೆನ್ನಾಗಿಯೇ ಇರುತ್ತದೆ.

ರಕ್ತಹೀನತೆ ತಡೆಯುವುದು: ಫಾಲಿಕ್ ಆಮ್ಲ ಮತ್ತು ವಿಟಮಿನ್ ಬಿ 12ರ ಕೊರತೆ, ಕಬ್ಬಿನಾಂಶದ ಕೊರತೆಯಿಂದಲೂ ರಕ್ತಹೀನತೆ ಉಂಟಾಗುವುದು. ಜೋಳದಲ್ಲಿ ಅತ್ಯಧಿಕ ಮಟ್ಟದ ಕಬ್ಬಿನಾಂಶವಿರುವ ಕಾರಣದಿಂದ ಇದು ಹೊಸ ಕೆಂಪು ರಕ್ತದ ಕಣಗಳನ್ನು ನಿರ್ಮಿಸುವುದು.

ನುಗ್ಗೆ ಸೊಪ್ಪು ಪೋಷಕಾಂಶಗಳ ನಿಧಿಯಾಗಿದೆ

Follow Us on :-