ಚಿನ್ನಾಭರಣಗಳನ್ನು ಕೆಲವು ಸಮಯ ಬಳಸಿದ ಬಳಿಕ ಸ್ವಲ್ಪ ಹೊಳಪು ಕಳೆದುಕೊಳ್ಳುವುದು ಸಹಜ. ಆದರೆ ಇದನ್ನು ಮನೆಯಲ್ಲಿಯೇ ತೊಳೆದು ಮತ್ತೆ ಹೊಳಪು ಮೂಡುವಂತೆ ಮಾಡಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಟಿಪ್ಸ್.
Photo Credit: Instagram
ಚಿನ್ನಾಭರಣ ಕೆಲವು ದಿನ ನಿರಂತರವಾಗಿ ಬಳಕೆ ಮಾಡಿದಾಗ ಕೊಳೆ ತುಂಬಿ ಕಪ್ಪಾಗುವುದು ಸಹಜ
ಪ್ರತೀ ವಾರಕ್ಕೊಮ್ಮೆಯಾದರೂ ಚಿನ್ನಾಭರಣವನ್ನು ತೊಳೆದು ಶುಭ್ರಗೊಳಿಸಿದರೆ ಹೊಳಪು ಕಳೆದುಕೊಳ್ಳುವುದಿಲ್ಲ
ಒಂದು ಬೌಲ್ ನಷ್ಟು ಮಾಮೂಲು ಡಿಟರ್ಜೆಂಟ್ ಅಥವಾ ಸೋಪ್ ನೀರು ತಯಾರಿಸಿ
ಈ ನೀರಿಗೆ ನೀವು ಬಳಸಿದ ಚಿನ್ನಾಭರಣವನ್ನು ಹಾಕಿ ಅರ್ಧಗಂಟೆ ನೆನೆಯಲು ಬಿಡಿ
ಬಳಿಕ ಟೂತ್ ಬ್ರಷ್ ತೆಗೆದುಕೊಂಡು ಅದನ್ನು ಮೃದುವಾಗಿ ಬ್ರಷ್ ಮಾಡಿ
ಇದನ್ನು ಹದ ಬಿಸಿ ನೀರಿನಲ್ಲಿ ಒಮ್ಮೆ ಚೆನ್ನಾಗಿ ಸೋಪ್ ಕೊಳೆ ಹೋಗುವಂತೆ ತೊಳೆಯಿರಿ
ಬಳಿಕ ತಂಪು ನೀರಿನಲ್ಲಿ ತೊಳೆದು ಶುದ್ಧ ಬಟ್ಟೆಯಲ್ಲಿ ಎರಡು ಗಂಟೆಗಳ ಕಾಲ ಮುಚ್ಚಿಟ್ಟರೆ ಕ್ಲೀನ್ ಆಗುತ್ತದೆ