ಸಿಹಿ ಕಡುಬು ತಯಾರಿಸುವ ಸುಲಭ ವಿಧಾನ

ಗಣೇಶ ಹಬ್ಬ ಎಂದರೆ ಸಿಹಿ ಕಡುಬು ನೈವೇದ್ಯ ಮಾಡಲೇಬೇಕು. ಇದೇ ಮೊದಲನೆಯ ಬಾರಿಗೆ ಸಿಹಿ ಕಡುಬು ತಯಾರಿಸುತ್ತಿದ್ದರೆ ಹೇಗೆ ತಯಾರಿಸುವುದು ಮತ್ತು ಏನೆಲ್ಲಾ ಸಾಮಗ್ರಿಗಳು ಬೇಕಾಗುತ್ತವೆ ಎಂಬ ಸುಲಭ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಒಂದೂವರೆ ಗ್ಲಾಸ್ ನೀರು ಹಾಕಿ ಒಲೆ ಮೇಲಿಟ್ಟು ಕುದಿಯಲು ಬಿಡಿ

ಇದಕ್ಕೆ ಉಪ್ಪು, ಎಣ್ಣೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ಇನ್ನೊಂದು ಬಾಣಲೆಯಲ್ಲಿ ಬಿಳಿ ಎಳ್ಳು, ಹುರಿಗಡಲೆ ಹಾಕಿಕೊಂಡು ಹುರಿಯಿರಿ

ಇದನ್ನು ಪುಡಿ ಮಾಡಿಕೊಂಡು ಇದಕ್ಕೆ ಕೊಬ್ಬರಿ ಅಥವಾ ಕಾಯಿತುರಿ, ಬೆಲ್ಲ ಹಾಕಿ ಹೂರಣ ಮಾಡಿ

ಈಗ ರೆಡಿ ಮಾಡಿಟ್ಟಿರುವ ಹಿಟ್ಟನ್ನು ನಾದಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ

ಇದರೊಳಗೆ ನಾಜೂಕಾಗಿ ಹೂರಣವಿಟ್ಟು ಅದು ಹೊರಗೆ ಬಾರದಂತೆ ಮುಚ್ಚಿಕೊಳ್ಳಿ

ಈಗ ಒಂದು ಹಬೆ ಪಾತ್ರೆಯಲ್ಲಿ ಇದನ್ನು ಬೇಯಿಸಿಕೊಂಡರೆ ಸಿಹಿಯಾದ ಕಡುಬು ರೆಡಿಯಾಗುತ್ತದೆ

ಗರಿಕೆ ಹುಲ್ಲಿನ ನಾನಾ ಪ್ರಯೋಜನಗಳು ತಿಳಿಯಿರಿ

Follow Us on :-