ಪ್ಲಾಸ್ಟಿಕ್ ಪಾತ್ರೆಯಿಂದ ಸಾಂಬಾರ್ ಕಲೆ ತೆಗೆಯಲು ಟಿಪ್ಸ್

ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ಪದಾರ್ಥ ಹಾಕುವುದು ಉತ್ತಮವಲ್ಲ. ಹಾಗಿದ್ದರೂ ಅನಿವಾರ್ಯವಾಗಿ ಹಾಕಿದರೆ ಪಾತ್ರೆಯಲ್ಲಿ ಜಿಡ್ಡು ಮತ್ತು ಕಲೆ ಉಳಿದುಕೊಂಡು ಬಿಡುತ್ತದೆ. ಇದನ್ನು ತೆಗೆಯಲು ಇಲ್ಲಿದೆ ಟಿಪ್ಸ್.

Photo Credit: Instagram, WD

ಪ್ಲಾಸ್ಟಿಕ್ ಪಾತ್ರೆಯಲ್ಲಿ ಜಿಡ್ಡು ಸಮೇತ ಸಾಂಬಾರ್ ಕಲೆ ಬೇಗನೇ ಹೋಗುವುದಿಲ್ಲ

ಸಾಮಾನ್ಯ ಡಿಶ್ ವಾಶ್ ಬಳಸಿ ಉಜ್ಜಿದರೂ ಪಾತ್ರೆಯಲ್ಲಿ ಕಲೆ ಉಳಿದುಕೊಳ್ಳುತ್ತದೆ

ಮೊದಲು ಹದ ಬಿಸಿ ನೀರಿಗೆ ಸ್ವಲ್ಪ ಡಿಶ್ ವಾಶ್ ಹಾಕಿ ದ್ರಾವಣ ಮಾಡಿಕೊಳ್ಳಿ

ಈ ದ್ರಾವಣದಲ್ಲಿ ಪಾತ್ರೆಯನ್ನು ಅರ್ಧಗಂಟೆ ನೆನೆಸಿ ತೊಳೆದುಕೊಳ್ಳಬಹುದು

ಸ್ವಲ್ಪ ವಿನೇಗರ್ ತೆಗೆದುಕೊಂಡು ಪಾತ್ರೆ ಉಜ್ಜಿದರೆ ಕಲೆ ಹೋಗುತ್ತದೆ

ಬೇಕಿಂಗ್ ಸೋಡಾವನ್ನು ಬಿಸಿ ನೀರಿಗೆ ಹಾಕಿ ಆ ದ್ರಾವಣದಲ್ಲಿ ನೆನೆಸಿಟ್ಟು ತೊಳೆಯಬಹುದು

ಸ್ವಲ್ಪ ನಿಂಬೆ ರಸವನ್ನು ತೆಗೆದುಕೊಂಡು ಕಲೆಯಿರುವ ಜಾಗಕ್ಕೆ ಚೆನ್ನಾಗಿ ಉಜ್ಜಿದರೆ ಕಲೆ ಹೋಗುತ್ತದೆ

ಪಾದಗಳನ್ನು ಉಪ್ಪು ನೀರಿನಲ್ಲಿಟ್ಟರೆ ಏನು ಉಪಯೋಗ

Follow Us on :-