ಕೆಲವೊಮ್ಮೆ ಮಾರುಕಟ್ಟೆಯಿಂದ ತಂದ ಸೌತೆಕಾಯಿ ಹಾಗೇ ಬಳಸಿದರೆ ಕಹಿ ರುಚಿ ಕೊಡುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಸೌತೆಕಾಯಿಯಿಂದ ಕಹಿ ಅಂಶ ತೆಗೆಯಲು ಕೆಲವೊಂದು ಟಿಪ್ಸ್ ಬಳಸಿ ನೋಡಬಹುದು. ಅದು ಇಲ್ಲಿದೆ.
Photo Credit: Instagram, AI image
ಅಂಗಡಿಯಿಂದ ಆದಷ್ಟು ಎಳೆಯ ಮತ್ತು ಫ್ರೆಶ್ ಕಾಣುವ ಸೌತೆಕಾಯಿಯನ್ನೇ ಖರೀದಿಸಿ
ಕೆಲವೊಮ್ಮೆ ಬಿಸಿಲಿಗೆ ಬಾಡಿಕೊಂಡಂತಿರುವ ಸೌತೆಕಾಯಿ ಕಹಿ ಅಂಶ ಕೊಡುವ ಸಾಧ್ಯತೆಯಿದೆ
ಸೌತೆಕಾಯಿಯನ್ನು ಕಡೆ ಭಾಗವನ್ನು ಒಂದು ಬಿಲ್ಲೆಯಂತೆ ಕಟ್ ಮಾಡಿಕೊಳ್ಳಿ
ಈಗ ಆ ಬಿಲ್ಲೆಯಿಂದ ಕಡೆಯ ಭಾಗವನ್ನು ಚೆನ್ನಾಗಿ ಉಜ್ಜಿ ಮಯಣ ತೆಗೆದರೆ ಕಹಿಯಾಗದು
ಕಹಿಯಿರುವ ಸೌತೆಕಾಯಿಯನ್ನು ಕಟ್ ಮಾಡಿ ಉಪ್ಪು ಬೆರೆಸಿಟ್ಟು ಬಳಿಕ ಬಳಸಿದರೆ ಕಹಿ ಹೋಗುತ್ತದೆ
ಸೌತೆಕಾಯಿಯ ಸಿಪ್ಪೆಯಲ್ಲಿ ಕಹಿ ಅಂಶವಿರುವ ಸಾಧ್ಯತೆಯಿದ್ದು ಅದನ್ನು ತೆಗೆದು ಬಳಸಿ
ಸೌತೆಕಾಯಿಯ ತಿರುಳು ತೆಗೆದು ಬಿಸಿ ನೀರಿನಲ್ಲಿ ಒಂದು ಕುದಿ ಕುದಿಸಿದರೆ ಕಹಿ ಹೋಗುತ್ತದೆ