ಸ್ಯಾಂಡ್ ವಿಚ್ ಎಂದರೆ ಎಲ್ಲಾ ಮಕ್ಕಳೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಇದನ್ನು ಮಕ್ಕಳೂ ತಾವೇ ಮಾಡಬಹುದು. ಚೀಸ್ ಇಲ್ಲದೇ ಸುಲಭವಾಗಿ ತರಕಾರಿ, ಬೆಣ್ಣೆ ಬಳಸಿ ಮಾಡಬಹುದಾದ ಸ್ಯಾಂಡ್ ವಿಚ್ ರೆಸಿಪಿ ಇಲ್ಲಿದೆ.
Photo Credit: Instagram, AI image
ಎರಡು ಸ್ಲೈಝ್ ಬ್ರೆಡ್ ಗಳನ್ನು ನಾಲ್ಕೂ ಬದಿ ಕತ್ತರಿಸಿ ಇಟ್ಟುಕೊಳ್ಳಿ
ಈಗ ಕ್ಯಾಪ್ಸಿಕಂ, ಈರುಳ್ಳಿ, ಟೊಮೆಟೊ ಚಿಕ್ಕದಾಗಿ ಕತ್ತರಿಸಟ್ಟುಕೊಳ್ಳಿ
ಒಂದು ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ ಈ ಮೂರೂ ತರಕಾರಿ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ
ಈಗ ಸ್ಲೈಝ್ ಮಾಡಿದ ಬ್ರೆಡ್ ನ ಒಳಭಾಗಕ್ಕೆ ಬೆಣ್ಣೆ ಸವರಿಟ್ಟುಕೊಳ್ಳಿ
ಬಳಿಕ ಈ ಬ್ರೆಡ್ ಮೇಲೆ ಫ್ರೈ ಮಾಡಿದ ತರಕಾರಿ ಹಾಕಿ ಇನ್ನೊಂದು ಸ್ಲೈಝ್ ನಿಂದ ಮುಚ್ಚಿ
ಈಗ ಒಂದು ತವಾಗೆ ಸ್ವಲ್ಪ ಬೆಣ್ಣೆ ಹಾಕಿ ಅದು ಬಿಸಿ ಮಾಡಿಕೊಳ್ಳಿ
ಬಳಿಕ ಬ್ರೆಡ್ ಸ್ಲೈಝ್ ಗಳನ್ನು ಹಾಕಿ ಎರಡೂ ಬದಿ ಬೇಯಿಸಿದರೆ ಸ್ಯಾಂಡ್ ವಿಚ್ ರೆಡಿ