ಚಿಕ್ಕ ಮಗುವಿಗೆ ಹಾಕುವ ಬಟ್ಟೆಗಳನ್ನು ಅಷ್ಟೇ ಶುಚಿಯಾಗಿ ತೊಳೆದುಕೊಳ್ಳುವುದು ಮುಖ್ಯ. ಇದರಿಂದ ಮಗುವಿಗೂ ಸೋಂಕು ಉಂಟಾಗುವುದು ತಪ್ಪುತ್ತದೆ. ಮಕ್ಕಳ ಬಟ್ಟೆ ತೊಳೆಯುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ.
Photo Credit: Instagram
ನವಜಾತ ಮಕ್ಕಳ ಬಟ್ಟೆ ಅತ್ಯಂತ ಶುದ್ಧವಾಗಿದ್ದರೆ ರೋಗಗಳು ಬಾರದಂತೆ ತಡೆಯಬಹುದು
ಮಕ್ಕಳ ಬಟ್ಟೆಯನ್ನು ತೊಳೆಯುವ ಮುನ್ನ ನೀರಿಗೆ ಡೆಟಾಲ್ ಹಾಕಿ ನೆನೆಸಿಡಿ
ಮಕ್ಕಳ ಬಟ್ಟೆಯನ್ನು ಬೇರೆ ಬಟ್ಟೆಗಳ ಜೊತೆ ಸೇರಿಸಿದೇ ಪ್ರತ್ಯೇಕವಾಗಿಯೇ ತೊಳೆಯಬೇಕು
ಬೇರೆಯವರ ಬಟ್ಟೆಯಲ್ಲಿರುವ ಸೋಂಕು ಮಕ್ಕಳ ಬಟ್ಟೆಗೆ ಅಂಟಿಕೊಂಡರೆ ಮಗುವಿಗೂ ತೊಂದರೆ
ಮಕ್ಕಳ ಬಟ್ಟೆಯನ್ನು ಒಗೆದ ಬಳಿಕ ಬಿಸಿಲಿನಲ್ಲಿಯೇ ಒಣಗಿಸಿ ಇದರಿಂದ ಕೀಟಾಣುಗಳು ನಾಶವಾಗುತ್ತದೆ
ಚೆನ್ನಾಗಿ ಒಣಗಿದ ಬಟ್ಟೆಯನ್ನೇ ಮಕ್ಕಳಿಗೆ ತೊಡಿಸಿದರೆ ಚರ್ಮದ ಅಲರ್ಜಿ, ತುರಿಕೆ ಉಂಟಾಗದು
ಮಕ್ಕಳ ಬಟ್ಟೆಯನ್ನು ಆದಷ್ಟು ಶುದ್ಧ ನೀರಿನಲ್ಲಿಯೇ ತೊಳೆದುಕೊಂಡರೆ ಉತ್ತಮ