ಫ್ರಿಡ್ಜ್ ನ ಫ್ರೀಜರ್ ನಲ್ಲಿ ಐಸ್ ಸಾಮಾನ್ಯವಾಗಿ ಗಟ್ಟಿಯಾಗುತ್ತಿದ್ದರೆ ಸಮಸ್ಯೆಯಿಲ್ಲ. ಅದರೆ ಕೆಲವೊಮ್ಮೆ ಫ್ರೀಝರ್ ನಲ್ಲಿ ಐಸ್ ನ ಪರ್ವತವೇ ಸೃಷ್ಟಿಯಾಗುತ್ತದೆ. ಇದು ಹೊರಗೆ ಹರಿದುಬಂದು ಅಧ್ವಾನವಾಗುತ್ತದೆ. ಐಸ್ ಕರಗಿಸಲು ಏನು ಉಪಾಯವಿದೆ ನೋಡಿ.
Photo Credit: WD, AI image
ಫ್ರಿಡ್ಜ್ ಕೇವಲ ಉಳಿದ ಸಾಮಾನುಗಳನ್ನು ಇಟ್ಟುಕೊಳ್ಳುವ ವೇಸ್ಟ್ ಬಾಕ್ಸ್ ಅಲ್ಲ
ಇದನ್ನು ವಾರಕ್ಕೆ ಒಮ್ಮೆಯಾದರೂ ಕ್ಲೀನ್ ಮಾಡದೇ ಹೋದರೆ ಫ್ರೀಝರ್ ಸಮಸ್ಯೆ ಬರಬಹುದು
ಫ್ರೀಝರ್ ನಲ್ಲಿ ಅಸಹಜವಾಗಿ ಐಸ್ ಗಟ್ಟಿ ಸೃಷ್ಟಿಯಾಗುತ್ತಿದ್ದರೆ ಫ್ರೀಝರ್ ಸಮಸ್ಯೆಯಾಗಿದೆ ಎಂದರ್ಥ
ಕೆಲವು ಸಮಯ ಫ್ರಿಡ್ಜ್ ಆಫ್ ಮಾಡಿ ಮಂಜುಗಡ್ಡೆ ಎಲ್ಲವೂ ಕರಗಿ ನೀರಾಗಲು ಅವಕಾಶ ಕೊಡಿ
ಫ್ರೀಝರ್ ನ ನೀರು ಹೋಗುವ ಪೈಪ್ ಬಂದ್ ಆಗಿದ್ದರೆ ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿ ಕ್ಲೀನ್ ಮಾಡಿ
ಐಸ್ ಎಲ್ಲವೂ ಕರಗಿ ಹೋದ ಮೇಲೆ ಒಂದು ಬಟ್ಟೆಯಿಂದ ಫ್ರೀಝರ್ ನನ್ನು ಚೆನ್ನಾಗಿ ಒರೆಸಿ
ನೆನಪಿರಲಿ, ಯಾವುದೇ ಕಾರಣಕ್ಕೂ ಐಸ್ ಕರಗಿಸಲು ಚಾಕುವಿನಂತಹ ಚೂಪಾದ ವಸ್ತು ಬಳಸಬೇಡಿ