ವಡೆ ಗರಿ ಗರಿಯಾಗಿ ಬರಬೇಕೆಂದರೆ ಟಿಪ್ಸ್

ತೂತು ವಡೆ ಯಾರಿಗೆ ಇಷ್ಟವಿಲ್ಲ ಹೇಳಿ? ಇಡ್ಲಿ ಜೊತೆಗೆ ತಿನ್ನಲು ಬೆಸ್ಟ್ ಕಾಂಬಿನೇಷನ್ ವಡೆ. ಆದರೆ ವಡೆ ಬಿಸಿ ಮತ್ತು ಗರಿ ಗರಿಯಾಗಿದ್ದರೆ ತಿನ್ನಲು ಅತ್ಯಂತ ರುಚಿಕರವಾಗಿರುತ್ತದೆ. ಹಾಗಿದ್ದರೆ ವಡೆ ಗರಿ ಗರಿಯಾಗಿ ಬರಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Social Media

ತೂತು ವಡೆ ಅಥವಾ ವಡೆಯನ್ನು ಮಾಡುವಾಗ ನಾಲ್ಕು ಗಂಟೆ ಮೊದಲೇ ಉದ್ದು ನೆನೆ ಹಾಕಿ

ಉದ್ದು ರುಬ್ಬುವಾಗ ಹೆಚ್ಚು ನೀರು ಸೇರಿಸದೇ ರುಬ್ಬಿದರೆ ವಡೆ ಕ್ರಿಸ್ಪಿಯಾಗಿ ಬರುತ್ತದೆ

ಉದ್ದು ರುಬ್ಬಿದ ಮೇಲೆ ಒಂದು ಸೌಟಿನಿಂದ ಚೆನ್ನಾಗಿ ಅದನ್ನು ಮಿಕ್ಸ್ ಮಾಡಿ

ವಡೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು ಮತ್ತು ಕರಿಬೇವು ಹದ ಪ್ರಮಾಣದಲ್ಲಿ ಸೇರಿಸಿ

ಬಾಣಲೆಯಲ್ಲಿ ಎಣ್ಣೆ ಹಾಕಿದ ಬಳಿಕ ಅದು ಚೆನ್ನಾಗಿ ಕಾದ ಬಳಿಕವೇ ವಡೆ ಮಾಡಿ ಹಾಕಿ

ವಡೆ ಮಾಡುವಾಗ ಅದರ ಶೇಪ್ ಓರೆ ಕೋರೆ, ದಪ್ಪ-ಸಣ್ಣಗಾಗದಂತೆ ಸರಿಯಾದ ಶೇಪ್ ಮಾಡಿ ಹಾಕಿ

ತೂತು ವಡೆ ಹಿಟ್ಟಿಗೆ ಚೂರೇ ಚೂರು ಅಕ್ಕಿ ಹುಡಿಯನ್ನು ಮಿಕ್ಸ್ ಮಾಡಿದರೆ ಕ್ರಿಸ್ಪಿಯಾಗುವುದು

ಮೆಹಂದಿ ಹೆಚ್ಚು ಕೆಂಪಾಗಬೇಕಾದರೆ ಟಿಪ್ಸ್

Follow Us on :-