ಮೆಹಂದಿ ಹೆಚ್ಚು ಕೆಂಪಾಗಬೇಕಾದರೆ ಟಿಪ್ಸ್

ಮದುವೆ, ಸಮಾರಂಭಗಳ ವೇಳೆ ಹೆಣ್ಣು ಮಕ್ಕಳು ಮೆಹಂದಿ ಹಚ್ಚುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. ಕೈಯಲ್ಲಿ ಮೆಹಂದಿಯ ಚಿತ್ತಾರ ಮೂಡಿಸಿದರೆ ಕೈಯ ಸೌಂದರ್ಯವೇ ಹೆಚ್ಚುತ್ತದೆ. ಆದರೆ ಮೆಹಂದಿ ಹೆಚ್ಚು ಕೆಂಪಾಗಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Social Media

ಮೆಹಂದಿಗೆ ಕೊಂಚ ಸಕ್ಕರೆ ಮತ್ತು ಲಿಂಬೆ ರಸವನ್ನು ಮಿಶ್ರಣ ಮಾಡಿ ಹಚ್ಚಿದರೆ ಇನ್ನಷ್ಟು ಕೆಂಪಾಗುತ್ತದೆ

ಮೆಹಂದಿಗೆ ಚಹಾ ಪುಡಿಯನ್ನು ಮಿಕ್ಸ್ ಮಾಡಿ ಹಾಕುವುದರಿಂದ ಹೆಚ್ಚು ಕೆಂಪಾಗಿ ಕಾಣುತ್ತದೆ

ಮೆಹಂದಿಗೆ ಕೊಂಚ ಲವಂಗ ಮಿಕ್ಸ್ ಮಾಡಿದರೆ ಕೆಂಪಾಗುವುದು ಮಾತ್ರವಲ್ಲ, ಹೆಚ್ಚು ಕಾಲ ಉಳಿಯುತ್ತದೆ

ಮೆಹಂದಿ ಹಚ್ಚಿದ ಕೈಗೆ ಕೊಂಚ ತುಪ್ಪ ಬಿಸಿ ಮಾಡಿ ಹಾಕಿದರೆ ಹೆಚ್ಚು ಕೆಂಪಗಾಗುತ್ತದೆ

ಮೆಹಂದಿ ಹಚ್ಚಿದ ಬಳಿಕ ಅದು ಒಣಗಿದಂತಾಗುವಾಗ ವಿಕ್ಸ್ ಮತ್ತು ಟೈಗರ್ ಬಾಮ್ ಹಚ್ಚಿ ನೋಡಿ!

ಮೆಹಂದಿ ಹಚ್ಚಿದ ತಕ್ಷಣವೇ ತೊಳೆದುಕೊಳ್ಳದೇ ಹೆಚ್ಚು ಹೊತ್ತು ಇರಿಸಿದರೆ ಹೆಚ್ಚು ಕೆಂಪಗಾಗುತ್ತದೆ

ಮೆಹಂದಿ ಜೊತೆಗೆ ಕೊಂಚ ಸುಣ್ಣ ಬೆರೆಸಿ ಹಚ್ಚಿದರೆ ಹೆಚ್ಚು ಕೆಂಪಾಗಿ ಕಾಣುತ್ತದೆ

ಕಣಿಲೆಯಲ್ಲಿ ಎಷ್ಟೊಂದು ಆರೋಗ್ಯಕರ ಅಂಶವಿದೆ ಗೊತ್ತಾ

Follow Us on :-