ಈ ಸೀಸನ್ ನಲ್ಲಿ ಮಲೆನಾಡು, ಕರಾವಳಿ ಭಾಗಗಳಿಗೆ ಹೋದರೆ ಕಣಿಲೆ ಎಂಬ ಗಡ್ಡೆ ತರಕಾರೀ ಹೇರಳವಾಗಿ ಸಿಗುತ್ತದೆ. ಕಣಿಲೆ ಎಂದರೆ ಎಳೆ ಬಿದಿರು. ಈ ಸೀಸನ್ ನಲ್ಲಿ ಕಣಿಲೆಯಿಂದ ಸಾಕಷ್ಟು ಖಾದ್ಯ ತಯಾರಿಸುತ್ತಾರೆ. ಇದರಿಂದ ಆರೋಗ್ಯಕ್ಕೆ ಎಷ್ಟೊಂದು ಉಪಯೋಗವಿದೆ ಗೊತ್ತಾ?
Photo Credit: Social Media
ಮಳೆಗಾಲದಲ್ಲಿ ಬಿದಿರು ಮೊಳಕೆಯೊಡೆದ ತಕ್ಷಣ ಸಿಗುವ ಎಳೆ ಗಡ್ಡೆಯನ್ನೇ ಕಣಿಲೆ ಎನ್ನುತ್ತಾರೆ
ಇದು ಉಷ್ಣ ಪ್ರಕೃತಿಯ ಗಡ್ಡೆಯಾಗಿದ್ದು, ಇದನ್ನು ಆಷಾಢದ ಶೈತ್ಯ ಹವಾಮಾನದಲ್ಲೇ ತಿನ್ನಲು ಯೋಗ್ಯ
ಕಣಿಲೆಯಿಂದ ಉಪ್ಪಿನಕಾಯಿ, ಪಲ್ಯ, ಸಾಂಬಾರ್, ಗಸಿ ಎಂದು ನಾನಾ ವಿಧದ ಅಡುಗೆ ತಯಾರಿಸಬಹುದು
ಕಣಿಲೆಯನ್ನು ಕತ್ತರಿಸಿದ ಬಳಿಕ ಎರಡು ದಿನ ಹರಿಯುವ ನೀರಿನಲ್ಲಿಟ್ಟು ಉಪಯೋಗಿಸಿದರೆ ವಿಷಕಾರೀ ಅಂಶ ಹೋಗುತ್ತದೆ
ಕಣಿಲೆಯಲ್ಲಿರುವ ಫಿನಾಲಿಕ್ ಎಂಬ ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದೆ
ಮಧುಮೇಹಿಗಳಿಗೂ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಕಣಿಲೆ ಸಹಕಾರಿಯಾಗಿರುತ್ತದೆ
ಮಳೆಗಾಲದಲ್ಲಿ ಶೀತದಿಂದ ಬರುವ ರೋಗಗಳನ್ನು ತಪ್ಪಿಸಿ ದೇಹ ಬೆಚ್ಚಗಿಡಲು ಕಣಿಲೆ ಸಹಾಯಕ