ಗೊಜ್ಜವಲಕ್ಕಿ ಮಕ್ಕಳಿಗೂ ಇಷ್ಟವಾಗುವ ಸುಲಭ ತಿಂಡಿಯಾಗಿದೆ. ಅವಲಕ್ಕಿ, ಹುಳಿ, ಬೆಲ್ಲ, ಉಪ್ಪು, ಒಗ್ಗರಣೆಗೆ ಕಡ್ಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಒಣ ಮೆಣಸು, ನೆಲಗಡಲೆ, ಕರಿಬೇವು, ಇಂಗು, ತೆಂಗಿನ ತುರಿ ಮತ್ತು ಎಣ್ಣೆ ಬಳಸಿ ರುಚಿಯಾದ ಗೊಜ್ಜವಲಕ್ಕಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.
Photo Credit: Social Media
ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು ಹಾಕಿ ಹುಡಿ ಮಾಡಿ
ದಪ್ಪ ಅವಲಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಹುಣಸೆ ಹಣ್ಣನ್ನು ನೆನಸಿ ನೀರು ತೆಗೆದಿಡಿ
ಮತ್ತೊಂದು ಬಾಣಲೆಯಲ್ಲಿ ಉದ್ದಿನ ಬೇಳೆ, ಕಡಲೆ ಬೇಳೆ, ಕೆಂಪು ಮೆಣಸು, ಸಾಸಿವೆ, ಇಂಗು ಕರಿಬೇವು ಹಾಕಿ ಒಗ್ಗರಣೆ ಮಾಡಿ
ಒಗ್ಗರಣೆಯಾದ ಬಳಿಕ ಸ್ಟವ್ ಆಫ್ ಮಾಡಿ ಅದಕ್ಕೆ ಹುಣಸೆ ರಸ, ಬೆಲ್ಲ ಹಾಕಿ ಮಿಕ್ಸ್ ಮಾಡಿ
ಈಗ ಸಣ್ಣ ಉರಿಯಲ್ಲಿ ಇದನ್ನು ಒಂದು ಕುದಿ ಕುದಿಸಿ ಅದಕ್ಕೆ ಅವಲಕ್ಕಿಯ ನೀರು ಹಿಂಡಿ ಬೆರೆಸಿ
ಈ ಮಿಶ್ರಣದಲ್ಲಿ ಅವಲಕ್ಕಿಯನ್ನು ಚೆನ್ನಾಗಿ ಕಲಸಿ ಕೆಲವು ನಿಮಿಷ ಹಾಗೆಯೇ ಬಿಡಿ
ಬಳಿಕ ಅದಕ್ಕೆ ತೆಂಗಿನ ತುರಿ ಹಾಕಿ ಕಲಸಿದರೆ ರುಚಿಯಾದ ಗೊಜ್ಜವಲಕ್ಕಿ ಸವಿಯಲು ಸಿದ್ಧವಾಗಿರುತ್ತದೆ