ಗರ್ಭಿಣಿಯರಿಗೆ ಎಲ್ಲಾ ರೀತಿಯ ಪೋಷಕಾಂಶಗಳೂ ದೇಹಕ್ಕೆ ಅಗತ್ಯ. ಇದರಿಂದ ಮಗುವಿನ ಬೆಳವಣಿಗೆ ಜೊತೆಗೆ ತಾಯಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಅದರಲ್ಲೂ ಮೂಳೆಗಳು ಗಟ್ಟಿಯಾಗಿರಬೇಕೆಂದರೆ ಗರ್ಭಿಣಿಯರು ಕ್ಯಾಲ್ಶಿಯಂ ಭರಿತ ಈ ಆಹಾರಗಳನ್ನು ಸೇವಿಸಲೇಬೇಕು.
Photo Credit: Social Media
ಮಗುವಿನ ಜೊತೆಗೆ ತಾಯಿಗೂ ಕ್ಯಾಲ್ಶಿಯಂ ಅಂಶ ಸಿಗಬೇಕೆಂದರೆ ಪ್ರತಿನಿತ್ಯ ಹಾಲು ಸೇವನೆ ಮಾಡಬೇಕು
ಹಾಲು ಮಾತ್ರವಲ್ಲದೆ, ಮೊಸರು, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳು ಕ್ಯಾಲ್ಶಿಯಂ ಒದಗಿಸಬಲ್ಲವು
ಬಾದಾಮಿಯನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಸುಲಭವಾಗಿ ಕ್ಯಾಲ್ಶಿಯಂ ಅಂಶ ಸಿಕ್ಕಿದಂತಾಗುತ್ತದೆ
ಒಣ ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಅಂಶ ಹೇರಳವಾಗಿದ್ದು ಮಗು ಮತ್ತು ತಾಯಿಯ ಆರೋಗ್ಯಕ್ಕೆ ಉತ್ತಮ
ವಿಟಮಿನ್ ಸಿ ಜೊತೆಗೆ ಕ್ಯಾಲ್ಸಿಯಂ ಅಂಶವಿರುವ ಆರೆಂಜ್ ಹಣ್ಣನ್ನು ಸಾಕಷ್ಟು ಸೇವನೆ ಮಾಡಿ