ಚಪಾತಿ ಗಟ್ಟಿಯಾಗಿ, ನಾರಿನಂತಾದರೆ ತಿನ್ನಲು ಇಷ್ಟವಾಗುವುದಿಲ್ಲ. ಆದರೆ ನೀವು ಮಾಡುವ ಚಪಾತಿ ಪೂರಿಯಂತೆ ಉಬ್ಬಿ, ಮೃದುವಾಗಿ ಬರಬೇಕೆಂಬ ಆಸೆ ನಿಮಗಿದೆಯಾ? ಹಾಗಿದ್ದರೆ ಈ ಕೆಲವು ಟ್ರಿಕ್ಸ್ ಗಳನ್ನು ಬಳಸಿ ನೋಡಿ
Photo Credit: Social Media
ಚಪಾತಿಗೆ ಉತ್ತಮ ದರ್ಜೆಯ ಗೋಧಿ ಹಿಟ್ಟನ್ನೇ ಬಳಸಿದರೂ ಮೃದುವಾಗಲು ಕೆಲವೊಂದು ಟಿಪ್ಸ್ ಪಾಲಿಸಬೇಕು
ಚಪಾತಿಗೆ ಹಿಟ್ಟು ಕಲೆಸುವಾಗ ಬಿಸಿ ನೀರು ಹಾಕಿಕೊಂಡು ಕಲಸಿದರೆ ಮೃದುವಾಗಿ ಮತ್ತು ಉಬ್ಬಿ ಬರುತ್ತದೆ
ಚಪಾತಿ ಹಿಟ್ಟಿಗೆ ಒಂದು ಪಚ್ಚೆ ಬಾಳೆ ಹಣ್ಣನ್ನು ಸೇರಿಸಿ ಕಲೆಸಿದರೆ ಚಪಾತಿ ಮೃದು ಮತ್ತು ಸಿಹಿಯಾಗುತ್ತದೆ
ಸಿಹಿ ಇಷ್ಟವಿಲ್ಲದಿದ್ದರೆ ಚಪಾತಿ ಮಾಡುವಾಗ ಒಂದು ಬೇಯಿಸಿದ ಆಲೂಗಡ್ಡೆ ಸೇರಿಸಿ
ಚಪಾತಿ ಮಾಡುವಾಗ ಬಿಸಿ ನೀರಿನ ಜೊತೆ ಸ್ವಲ್ಪ ತುಪ್ಪ ಸೇರಿಸಿಕೊಂಡು ಕಲೆಸಿ
ಚಪಾತಿ ಕಲೆಸುವಾಗ ಸ್ವಲ್ಪ ಬಿಸಿ ಹಾಲು ಹಾಕಿ ಕಲೆಸಿದರೆ ಚಪಾತಿ ಉಬ್ಬಿ ಬರುತ್ತದೆ
ಗೋಧಿ ಹಿಟ್ಟು ಕಲೆಸುವಾಗ ಸ್ವಲ್ಪ ಮೊಸರು ಬಳಸಿ ಕಲೆಸಿದರೆ ಚಪಾತಿ ಮೃದುವಾಗುತ್ತದೆ