ಮನೆಯ ಟೆರೇಸ್ ವಿಶಾಲವಾಗಿದ್ದರೆ ಅಲ್ಲಿ ಪಾಟ್ ಗಳಲ್ಲಿ ಗಿಡಗಳನ್ನು ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಬಹುದು. ದಿನನಿತ್ಯ ಬಳಸುವ ಆಲೂಗಡ್ಡೆಯನ್ನು ಪಾಟ್ ನಲ್ಲಿ ಬೆಳೆಸುವುದು ಹೇಗೆ ಎಂದು ಇಲ್ಲಿದೆ ಟಿಪ್ಸ್.
Photo Credit: Facebook
ಆಲೂಗಡ್ಡೆ ಬೆಳೆಯಲು ಮಣ್ಣಿನ ಅಗಲವಾದ ಮತ್ತು ದೊಡ್ಡದಾದ ಪಾಟ್ ಬಳಸಿ
ಮಾರುಕಟ್ಟೆಯಿಂದ ಉತ್ತಮ ತಳಿಯ ಆಲೂಗಡ್ಡೆ ಬೀಜವನ್ನು ತಂದು ಪಾಟ್ ನಲ್ಲಿ ಹಾಕಿ
ಪಾಟ್ ನಲ್ಲಿ 50 ಶೇಕಡಾ ಮಣ್ಣು, ಸ್ವಲ್ಪ ಸಾವಯವ ಗೊಬ್ಬರ ಮತ್ತು ಕೋಕೋ ಪೀಟ್ ಮಿಕ್ಸ್ ಮಾಡಿ
ಪಾಟ್ ನ ಮಣ್ಣಿನಿಂದ ಸುಮಾರು 5-6 ಇಂಚು ಕೆಳಗೆ ಬೀಜ ಅಥವಾ ಮೊಳಕೆಯೊಡೆದ ಆಲೂ ಹಾಕಿ
ಆ ಬಳಿಕ ಮೇಲ್ಭಾಗಕ್ಕೆ ಮುಚ್ಚುವಷ್ಟು ಮಣ್ಣು ಹಾಕಿಕೊಳ್ಳಿ
ಆಲೂಗಡ್ಡೆ ಗಿಡಕ್ಕೆ ಹೆಚ್ಚು ನೀರೂ ಇರಬಾರದು ಅದೇ ರೀತಿ ಒಣಗದಂತೆಯೂ ನೋಡಿಕೊಳ್ಳಬೇಕು
ಗಿಡ ಬೆಳೆದು ಅದರ ಎಲೆಗಳು ಹಣ್ಣಾಗಿ ಒಣಗಿದಾಗ ಆಲೂಗಡ್ಡೆ ಸರಿಯಾಗಿ ಬೆಳೆದಿದೆ ಎಂದರ್ಥ