ಮಳೆ ಬರುವಾಗ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿ ಈರುಳ್ಳಿ ಪಕೋಡ ತಿನ್ನಲು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ? ಆದರೆ ಈರುಳ್ಳಿ ಪಕೋಡ ಹೋಟೆಲ್ ನಲ್ಲಿ ಮಾಡುವಂತೆ ಕ್ರಿಸ್ಪಿಯಾಗಿ ಬರಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.
Photo Credit: Instagram, Facebook
ಈರುಳ್ಳಿ ಪಕೋಡ ಮಾಡಲು ಆದಷ್ಟು ದೊಡ್ಡ ಗಾತ್ರದ ಈರುಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಿ
ದೊಡ್ಡ ಗಾತ್ರದ ಈರುಳ್ಳಿಯನ್ನು ತೆಳುವಾಗಿ ಉದ್ದವಾಗಿ ಕಟ್ ಮಾಡಿಕೊಳ್ಳಿ
ಕಟ್ ಮಾಡಿರುವ ಈರುಳ್ಳಿಯನ್ನು ಹೋಳುಗಳನ್ನು ಎಸಳು ಎಸಳಾಗಿ ಮಾಡಿಕೊಳ್ಳಿ
ಪಕೋಡಗೆ ಹಿಟ್ಟು ಕಲಸುವಾಗ ಒಂದು ಕಪ್ ಗೆ ಅರ್ಧ ಕಪ್ ನಷ್ಟು ಅಕ್ಕಿ ಹಿಟ್ಟು ಸೇರಿಸಿ
ಪಕೋಡ ಕಲಸುವಾಗ ಹಿಟ್ಟಿಗೆ ಪ್ರತ್ಯೇಕವಾಗಿ ನೀರು ಹಾಕದೇ ಈರುಳ್ಳಿಯೇ ನೀರು ಬಿಡಲು ಬಿಡಿ
ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಕಾದ ಬಳಿಕವೇ ಪಕೋಡವನ್ನು ಎಣ್ಣೆಗೆ ಹಾಕಿ
ಆದಷ್ಟು ಮಧ್ಯಮ ಉರಿಯಲ್ಲಿ ಬೇಯಿಸಿ ಗುಳ್ಳೆಗಳು ಸಂಪೂರ್ಣವಾಗಿ ನಿಂತ ಮೇಲೆ ಎಣ್ಣೆಯಿಂದ ತೆಗೆಯಿರಿ