ಐರನ್ ಬಾಕ್ಸ್ ಕಪ್ಪಾಗಿದ್ದರೆ ಹೀಗೆ ಮಾಡಿ

ಪ್ರತಿನಿತ್ಯ ಬಳಸುವ ಐರನ್ ಬಾಕ್ಸ್ ಕೆಲವು ಸಮಯದ ನಂತರ ಅಡಿ ಭಾಗ ಕಪ್ಪಗಾಗುವುದು ಸಹಜ. ಒಂದು ರೀತಿಯ ಅಂಟು ಅದಕ್ಕೆ ತಾಕಿ ಕಪ್ಪು ಬಣ್ಣದ ಕೋಟಿಂಗ್ ಬರಬಹುದು. ಇದನ್ನು ಕ್ಲೀನ್ ಮಾಡಿ ಐರನ್ ಬಾಕ್ಸ್ ನಿಂದ ಬಟ್ಟೆಗೆ ಕೊಳೆ ಹಿಡಿಯಬಾರದೆಂದರೆ ಹೀಗೆ ಮಾಡಿ.

Photo Credit: Social Media

ಬಟ್ಟೆಯಲ್ಲಿರುವ ಕೊಳೆ ಐರನ್ ಬಾಕ್ಸ್ ಬಿಸಿಯಾದಾಗ ಅಡಿಭಾಗದಲ್ಲಿ ಶೇಖರಣೆಯಾಗಿ ಕಪ್ಪಗಾಗುತ್ತದೆ

ಇದನ್ನು ಕ್ಲೀನ್ ಮಾಡಲು ಐರನ್ ಬಾಕ್ಸ್ ತಣ್ಣಗಿದ್ದಾಗ ಒಂದು ಸ್ಕ್ರಬರ್ ನಿಂದ ಒರೆಸಿ

ಸ್ವಲ್ಪ ವಿನೇಗರ್ ದ್ರಾವಣ ಮಾಡಿಕೊಂಡು ಅಡಿಭಾಗ ಶುಚಿಗೊಳಿಸಿ ಬಟ್ಟೆಯಿಂದ ಒರೆಸಿ

ಬೇಕಿಂಗ್ ಸೋಡಾ ದ್ರಾವಣ ಮಾಡಿಕೊಂಡು ಕಪ್ಪಗಿರುವ ಅಡಿಭಾಗವನ್ನು ಬೆಳ್ಳಗಾಗಿಸಬಹುದು

ಐರನ್ ಬಾಕ್ಸ್ ಸ್ವಲ್ಪ ಬಿಸಿ ಮಾಡಿಕೊಂಡು ಪೇಪರ್ ತುಣುಕಿನಿಂದ ಚೆನ್ನಾಗಿ ಉಜ್ಜಿ ಶುಚಿಗೊಳಿಸಬಹುದು

ಒಂದು ಹತ್ತಿಯ ತುಣುಕಿಗೆ ನೈಲ್ ಪಾಲಿಶ್ ರಿಮೂರ್ ಹಾಕಿಕೊಂಡು ಐರನ್ ಬಾಕ್ಸ್ ಶುಚಿಗೊಳಿಸಬಹುದು

ನೆನಪಿರಲಿ, ಯಾವುದೇ ದ್ರಾವಣ ಉಪಯೋಗಿಸಿದರೆ ಐರನ್ ಬಾಕ್ಸ್ ನ್ನು ಚೆನ್ನಾಗಿ ಆರಿದ ನಂತರವೇ ಬಳಕೆ ಮಾಡಬೇಕು

ಗಿಡದಲ್ಲಿ ಹೆಚ್ಚು ಹೂ ಬಿಡಲು ಹೀಗೆ ಮಾಡಿ

Follow Us on :-