ಗಿಡ ನೆಟ್ಟು ಎಷ್ಟು ಸಮಯ ಕಳೆದರೂ ಚೆನ್ನಾಗಿ ಹೂ ಬಿಡುತ್ತಿಲ್ಲ ಎಂಬ ಚಿಂತೆಯೇ? ತಾರಸಿ ಕೃಷಿ ಮಾಡುವವರು ಗಿಡದಲ್ಲಿ ಹೂ ಬಿಡಲು ಏನು ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಹೆಚ್ಚು ಹೂ ಬಿಡಲು ನಾವು ಈ ಕೆಲವೊಂದು ಟೆಕ್ನಿಕ್ ಬಳಸಬೇಕು.
Photo Credit: Social Media
ಗಿಡಗಳಲ್ಲಿ ಹೆಚ್ಚು ಹೂ ಬಿಡಲು ಅದಕ್ಕೆ ಕಾಲಕ್ಕೆ ತಕ್ಕ ಹಾಗೆ ನೀರು, ಗೊಬ್ಬರ ಹಾಕುತ್ತಿರುವುದು ಮುಖ್ಯ.
ಬೆಳಗಿನ ಹೊತ್ತು ನೀರು ಹಾಯಿಸುವಾಗ ಅದರ ಎಲೆಗಳಿಗೂ ನೀರು ಹನಿ ಹನಿಯಾಗಿ ಬೀಳುವಂತೆ ನೋಡಿಕೊಳ್ಳಿ
ಟೀ ಮಾಡಿ ಉಳಿದ ಪುಡಿಗೆ ಸ್ವಲ್ಪ ಹಾಲು ಹಾಕಿ ಒಂದು ರಾತ್ರಿ ನೆನೆಸಿಟ್ಟು ಮರುದಿನ ಅದನ್ನು ಗಿಡಕ್ಕೆ ಹಾಕಿ
ಇಂಗು ಮತ್ತು ಚಹಾ ಪುಡಿಯನ್ನು ಮಿಕ್ಸ್ ಮಾಡಿ 2-3 ಗಂಟೆ ನೆನೆ ಹಾಕಿ ಬಳಿಕ ಹೂವಿನ ಗಿಡಕ್ಕೆ ಹಾಕಿ
ಮೊದಲ ಬಾರಿಗೆ ಹೂವು ಬಿಡಲು ಮೊಗ್ಗು ಆದಾಗ ಅವುಗಳನ್ನು ಚಿವುಟಿದರೆ ಮತ್ತಷ್ಟು ಹೂ ಬಿಡುತ್ತದೆ
ಹೂವಿನ ಗಿಡಗಳಿಗೆ ಗೋವಿನ ಸೆಗಣಿ ಹಾಕುವುದರಿಂದ ಸಾಕಷ್ಟು ಹೂವುಗಳು ಬಿಡುತ್ತವೆ
ಪಶುಗಳಿಗೆ ಹಾಕುವ ನೆಲಗಡಲೆಯ ಹಿಂಡಿಯನ್ನು ನೆನೆ ಹಾಕಿ ಗಿಡಗಳಿಗೆ ಹಾಕಿದರೆ ಚೆನ್ನಾಗಿ ಹೂ ಬಿಡುತ್ತವೆ