ಪ್ರತಿನಿತ್ಯ ಬಳಕೆ ಮಾಡುವ ಪಾತ್ರೆಯ ಅಡಿಭಾಗ ಕಪ್ಪಾಗಿ ಅಸಹ್ಯವಾಗಿ ಕಾಣುತ್ತಿದ್ದರೆ ಅದನ್ನು ಸಿಂಪಲ್ ಆಗಿ ಮನೆಯಲ್ಲಿಯೇ ಇರುವ ವಸ್ತು ಬಳಕೆ ಮಾಡಿಕೊಂಡು ಹೊಳಪು ಮೂಡುವಂತೆ ಮಾಡಬಹುದು. ಅದು ಹೇಗೆ ಇಲ್ಲಿದೆ ಟಿಪ್ಸ್.
Photo Credit: Instagram, AI image
ಪಾತ್ರೆ ಸೀದು ಹೋದಾಗ ಅಡಿಭಾಗ ಕಪ್ಪಾಗಿದ್ದರೆ ಅದನ್ನು ಕ್ಲೀನ್ ಮಾಡಬಹುದು
ಎರಡು ನಿಂಬೆ ಹಣ್ಣು, ವಿನೇಗರ್, ಬೇಕಿಂಗ್ ಸೋಡಾ, ಲಿಕ್ವಿಡ್ ಸೋಪ್ ಬೇಕಾಗುತ್ತದೆ
ಎರಡು ನಿಂಬೆ ಹಣ್ಣನ್ನು ಕಟ್ ಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ರಸ ತೆಗೆದುಕೊಳ್ಳಿ
ಈಗ ಈ ರಸಕ್ಕೆ ನಾಲ್ಕೈದು ಡ್ರಾಪ್ ಸಾಮಾನ್ಯವಾಗಿ ಬಳಸುವ ಲಿಕ್ವಿಡ್ ಸೋಪ್ ಹಾಕಿ
ಇದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಪೌಡರ್ ಮತ್ತು ವಿನೇಗರ್ ಡ್ರಾಪ್ ಕೂಡಾ ಹಾಕಿ
ಈಗ ಇದನ್ನು ಚೆನ್ನಾಗಿ ತಿರುವಿಕೊಂಡು ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ
ಈ ದ್ರಾವಣದಿಂದ ಅಡಿ ಕಪ್ಪಾಗಿರುವ ಪಾತ್ರೆಯನ್ನು ಕ್ಲೀನ್ ಮಾಡಿದರೆ ಮೊದಲಿನ ಹೊಳಪು ಸಿಗುತ್ತದೆ