ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿದು ಕಪ್ಪಗಾಗಿ ಬಿಡುತ್ತದೆ. ಇದನ್ನು ಸರಿಪಡಿಸಿ ಪಾತ್ರೆಯನ್ನು ಮೊದಲಿನಂತೆ ಹೊಳೆಯುವಂತೆ ಮಾಡುವುದೇ ದೊಡ್ಡ ತಲೆನೋವು. ತಳ ಹಿಡಿದು ಕಪ್ಪಗಾದ ಪಾತ್ರೆ ಸರಿಪಡಿಸಲು ಇಲ್ಲಿದೆ ಟಿಪ್ಸ್.
Photo Credit: Social Media
ಪಾತ್ರೆಗಳು ತಳ ಹಿಡಿದು ಅಡಿ ಕಪ್ಪಗಾದರೆ ಅದನ್ನು ಸ್ಪೂನ್ ಬಳಸಿ ತೆಗೆಯಲು ಹೊರಟರೆ ಕೈನೋವು ಬರಬಹುದಷ್ಟೇ
ತಳ ಹಿಡಿದ ಪಾತ್ರೆಗೆ ಸ್ವಲ್ಪ ಬಿಸಿ ನೀರು ಹಾಕಿ ಸ್ವಲ್ಪ ಹೊತ್ತು ನೆನೆಯಲು ಬಿಡಿ
ಪಾತ್ರೆ ಸೀದು ಹೋಗಿದ್ದರೆ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿದ ನೀರನ್ನು ಹಾಕಿ ನೆನೆಸಿ ನಂತರ ತೊಳೆಯಿರಿ
ವಿನೇಗರ್ ಮತ್ತು ಈರುಳ್ಳಿಯ ನೀರು ಮಾಡಿಕೊಂಡು ಪಾತ್ರೆಗೆ ಹಾಕಿಟ್ಟು ಸ್ವಲ್ಪ ಸಮಯದ ನಂತರ ತೊಳೆಯಿರಿ
ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಮಿಶ್ರಣ ಮಾಡಿ ಸೀದು ಹೋದ ಪಾತ್ರೆ ಬೇಗನೇ ತೊಳೆಯಬಹುದು
ಉಪ್ಪು ಮತ್ತು ವಿನೇಗರ್ ದ್ರಾವಣವನ್ನು ಮಾಡಿ ಸೀದು ಹೋದ ಪಾತ್ರೆಗೆ ಹಾಕಿದರೆ 15 ನಿಮಿಷಗಳಲ್ಲಿ ಕ್ಲೀನ್ ಆಗುತ್ತದೆ
ನಿಂಬೆ ಹಣ್ಣಿನ ಹೋಳಿನಿಂದ ತಳ ಹಿಡಿದ ಪಾತ್ರೆಯನ್ನು ಚೆನ್ನಾಗಿ ತಿಕ್ಕಿದರೆ ಕಲೆ ಬೇಗನೇ ಹೋಗುತ್ತದೆ