ಹೊಸ ಚಪ್ಪಲಿ ಕಡಿತ ತಪ್ಪಿಸಲು ಟಿಪ್ಸ್

ಹೊಸ ಚಪ್ಪಲಿ ಎಂದು ಖುಷಿಯಿಂದ ಹೊರಗಡೆ ಹಾಕಿಕೊಂಡು ಓಡಾಡಿದರೆ ಆ ದಿನ ಸಂಜೆ ಕಾಲಿನಲ್ಲಿ, ಉರಿ ಗುಳ್ಳೆಗಳಾಗುವ ಸಮಸ್ಯೆ ಕಂಡುಬರುತ್ತದೆ. ಇದರಿಂದ ಮತ್ತೆ ಚಪ್ಪಲಿ ಹಾಕಲೂ ಆಗದಂತೆ ನೋವಾಗುತ್ತದೆ. ಚಪ್ಪಲಿ ಕಡಿತ ತಪ್ಪಿಸಲು ಇಲ್ಲಿದೆ ಟಿಪ್ಸ್

credit: social media

ಹೊಸ ಚಪ್ಪಲಿ ಹಾಕಿಕೊಂಡಾಗ ಕಾಲಿನಲ್ಲಿ ಗುಳ್ಳೆಗಳು ಅಥವಾ ಕೆಂಪಗಾಗಿ ಉರಿಯುವುದು ಸಹಜ

ಚಪ್ಪಲಿ ಖರೀದಿಸುವಾಗ ಆದಷ್ಟು ಒರಟು ಅಂಚಿಲ್ಲದ, ಮೃದುವಾದ ಚಪ್ಪಲಿಗಳನ್ನು ಖರೀದಿಸಿ

ಹೊಸ ಚಪ್ಪಲಿ ಧರಿಸುವ ಮೊದಲು ಕಾಲಿನ ಪಾದಗಳಿಗೆ ತೆಂಗಿನ ಎಣ್ಣೆ ಹಚ್ಚಿಕೊಂಡು ಆ ಬಳಿಕ ಧರಿಸಿ

ಹೊಸ ಚಪ್ಪಲಿ ಧರಿಸಿ ಗುಳ್ಳೆಗಳಾಗಿದ್ದರೆ ಆ ಜಾಗಕ್ಕೆ ಅಲ್ಯುವೀರಾ ಜೆಲ್ ಹಚ್ಚಿಕೊಂಡರೆ ವಾಸಿಯಾಗುತ್ತದೆ

ಆಂಟಿ ಆಕ್ಸಿಡೆಂಟ್ ಅಂಶವಿರುವ ಜೇನು ತುಪ್ಪವನ್ನು ಹಚ್ಚಿಕೊಳ್ಳುವುದರಿಂದ ಗುಳ್ಳೆ ನಿವಾರಣೆಯಾಗುತ್ತದೆ

ಬೇವು ಮತ್ತು ಅರಿಶಿನವನ್ನು ಪೇಸ್ಟ್ ಮಾಡಿ ಹಚ್ಚಿಕೊಳ್ಳುವುದರಿಂದ ಗುಳ್ಳೆಗಳು ಕೀವಾಗದಂತೆ ನೋಡಿಕೊಳ್ಳುತ್ತದೆ

ಈ ಆಹಾರಗಳನ್ನು ಮತ್ತೆ ಬಿಸಿ ಮಾಡಬೇಡಿ

Follow Us on :-