ಈ ಆಹಾರಗಳನ್ನು ಮತ್ತೆ ಬಿಸಿ ಮಾಡಬೇಡಿ

ಕೆಲವೊಂದು ಆಹಾರ ವಸ್ತುಗಳನ್ನು ಆಗಾಗ ತಯಾರಿಸಿ ಫ್ರೆಶ್ ಆಗಿಯೇ ಸೇವಿಸಿದರೆ ಅದರ ಆರೋಗ್ಯಕರ ಅಂಶ ನಮಗೆ ಸಿಗುತ್ತದೆ. ಮತ್ತೊಮ್ಮೆ ಬಿಸಿ ಮಾಡಬಾರದಂತಹ ಕೆಲವು ಆಹಾರಗಳಿದ್ದು ಅವು ಯಾವುವು ನೋಡೋಣ.

credit: social media

ಆಹಾರದಲ್ಲಿರುವ ಪೋಷಕಾಂಶಗಳು ನಷ್ಟವಾಗದಂತೆ ತಡೆಯಲು ಅವುಗಳನ್ನು ರಿ ಹೀಟ್ ಮಾಡಬೇಡಿ

ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡುವುದು ಅಥವಾ ಅದಕ್ಕೆ ನೀರು ಸೇರಿಸಿ ಬಿಸಿ ಮಾಡುವುದು ಮಾಡಬೇಡಿ

ಚಹಾ ಬಿಸಿ ಬಿಸಿಯಾಗಿರುವಾಗ ಕುಡಿಯಲು ಇಷ್ಟವೆಂದು ಮತ್ತೊಮ್ಮೆ ಬಿಸಿ ಮಾಡಿ ಕುಡಿದರೆ ಜೀರ್ಣಕ್ರಿಯೆ ಸಮಸ್ಯೆಯಾಗಬಹುದು

ಮೊಟ್ಟೆ ಮತ್ತು ಮೊಟ್ಟೆ ಹಾಕಿದ ಆಹಾರಗಳನ್ನು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳಬಹುದು

ಮಶ್ರೂಮ್ ಬಳಸಿ ಮಾಡಿದ ಅಡುಗೆಯನ್ನು ಮತ್ತೆ ಬಿಸಿ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಯಾಗಬಹುದು

ಆಲೂಗಡ್ಡೆಯ ಪದಾರ್ಥವನ್ನು ಮತ್ತೆ ಬಿಸಿ ಮಾಡುವುದರಿಂದ ಟಾಕ್ಸಿಕ್ ಅಂಶ ಉತ್ಪತ್ತಿಯಾಗಬಹುದು

ಬಸಳೆ, ಪಾಲಕ್ ಸೊಪ್ಪಿನ ಪದಾರ್ಥವನ್ನು ಬಿಸಿ ಮಾಡುವುದರಿಂದ ನೈಟ್ರೈಟ್ಸ್ ಅಂಶ ಉತ್ಪತ್ತಿಯಾಗಬಹುದು

ಫುಡ್ ಪಾಯಿಸನ್ ಆದಾಗ ಹೀಗೆ ಮಾಡಿ

Follow Us on :-