ಅಡುಗೆ ಮನೆಯಲ್ಲಿ ಬಳಸಿ ಬಿಸಾಡುವ ಕೆಲವೊಂದು ವಸ್ತುಗಳು ನಿಮ್ಮ ಮನೆಯ ಪಾಟ್ ನಲ್ಲಿ ಬೆಳೆಸುವ ಗಿಡಗಳಿಗೆ ಅತ್ಯುತ್ತಮ ಗೊಬ್ಬರವಾಗಿ ಮರು ಬಳಕೆಯಾಗಬಹುದು. ಹಾಗಿದ್ದರೆ ಅಂತಹ ವಸ್ತುಗಳು ಯಾವುವೆಲ್ಲಾ ಎಂದು ನೋಡೋಣ.
Photo Credit: Social Media
ಈರುಳ್ಳಿಯ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಸೇರಿಸುವ ಬದಲು ಗಿಡಗಳಿಗೆ ಹಾಕಿದರೆ ಗೊಬ್ಬರವಾಗುತ್ತದೆ
ಅಡುಗೆ ಮನೆಯಲ್ಲಿ ಕೊಳೆತ ತರಕಾರಿ ಇದ್ದರೆ ಅದನ್ನು ಕಸದ ಬುಟ್ಟಿಗೆ ಹಾಕುವ ಬದಲು ಗಿಡಗಳಿಗೆ ಹಾಕಿ
ಚಹಾ ಮಾಡಿದ ಬಳಿಕ ಸಿಗುವ ಚಹಾ ಪುಡಿಯನ್ನು ಬಿಸಾಡದೇ ಗಿಡಗಳಿಗೆ ಹಾಕಿದ್ದರೆ ಅತ್ತುತ್ತಮ ಗೊಬ್ಬರವಾಗುತ್ತದೆ
ಕಾಫಿ ಪೌಡರ್ ನ್ನೂ ಬಳಸಿದ ಬಳಿಕ ಕಸದ ಬುಟ್ಟಿಗೆ ಸೇರಿಸದೇ ಗಿಡಗಳಿಗೆ ಹಾಕಿ ನೋಡಿ
ಕ್ಯಾರೆಟ್, ಬೀಟ್ ರೂಟ್ ನಂತಹ ತರಕಾರಿಗಳ ಸಿಪ್ಪೆಯನ್ನು ಒಟ್ಟು ಮಾಡಿ ಗಿಡಗಳಿಗೆ ಹಾಕಿ
ತೆಂಗಿನ ಕಾಯಿಯ ಹೊರಾವರಣ ಗಿಡಗಳಿಗೆ ಅತ್ಯುತ್ತಮ ಗೊಬ್ಬರವಾಗಿ ಬಳಕೆಯಾಗಬಹುದು
ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೊಟ್ಯಾಶಿಯಂ ಅಂಶ ಗಿಡಗಳನ್ನು ಚೆನ್ನಾಗಿ ಬೆಳೆಯಲು ಸಹಾಯಕವಾಗಿದೆ