ಮಧುಮೇಹ ನಿಯಂತ್ರಣಕ್ಕೆ ಈ ಟಿಪ್ಸ್ ಫಾಲೋ ಮಾಡಿ

ಪುರುಷರಂತೆ ಡಯಾಬಿಟಿಸ್ ಮಹಿಳೆಯರಲ್ಲೂ ಸಾಮಾನ್ಯವಾಗಿದೆ. ಮಹಿಳೆಯರಿಗೆ ಮಧುಮೇಹ ಬರುವ ಸಾಧ್ಯತೆ ಕಡಿಮೆ ಎನ್ನುವ ಕಲ್ಪನೆ ಇದೆ. ಆದರೆ ಈ ವಾದವನ್ನು ವೈದ್ಯರು ತಳ್ಳಿ ಹಾಕಿದ್ದು, ಮಹಿಳೆಯರಲ್ಲೂ ಈ ಕಾಯಿಲೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ ಎಂದು ಹೇಳಿದ್ದಾರೆ.

photo credit social media

ಸಕ್ಕರೆ ಕಾಯಿಲೆ ಎಂದು ಕರೆಯಲಾಗುವ ಮಧುಮೇಹ ಪುರುಷ, ಮಹಿಳೆ, ದೊಡ್ಡವರು, ವಯಸ್ಸಾದವರೂ ಎಂಬ ಯಾವುದೇ ಭೇಧವಿಲ್ಲದೇ ಕಾಣಿಸಿಕೊಳ್ಳುತ್ತಿರುವ ಮದ್ದಿಲ್ಲದ ಕಾಯಿಲೆ. ಒಮ್ಮೆ ಬಂತೂ ಎಂತಾದರೆ, ಅದನ್ನು ನಿಯಂತ್ರಣದಲ್ಲಿಡುತ್ತಾ ಹೋಗಬೇಕೇ ವಿನಃ ಶಮನ ಮಾಡಲೂ ಸಾಧ್ಯವೇ ಇಲ್ಲ.

ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳೋದು ತುಂಬಾ ಸಾಮಾನ್ಯವಾಗಿದೆ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ ಸಂಭವಿಸುವ ಗರ್ಭಾವಸ್ಥೆಯ ಮಧುಮೇಹವು ಮಹಿಳೆಯರಿಗೆ ಅಪಾಯಕಾರಿಯಾಗಿದೆ.

ಮಹಿಳೆಯರ ರಕ್ತದಲ್ಲಿನ ಸಕ್ಕರೆ ಮಟ್ಟವು ಅವರ ಋತುಚಕ್ರ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ, ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅನಿಯಂತ್ರಿತ ಮಧುಮೇಹವು ಮೂತ್ರಪಿಂಡದ ಕಾಯಿಲೆ, ದೃಷ್ಟಿ ನಷ್ಟ, ಹಲವಾರು ಚರ್ಮದ ಕಾಯಿಲೆಗಳು, ನರಗಳ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಾದರೆ ಮಹಿಳೆಯರು ಈ ಡಯಾಬಿಟಿಸ್‌ ಅನ್ನು ನಿಯಂತ್ರಣದಲ್ಲಿಡಲು ಏನು ಮಾಡಬೇಕು? ಲೈಫ್‌ಸ್ಟೈಲ್‌ ಹೇಗಿರಬೇಕು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಮಹಿಳೆಯರು ಈ ಸ್ಥಿತಿಯಲ್ಲಿ ಬಹಳಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು, ಕೊಬ್ಬಿನಂಶವಿಲ್ಲದ ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಸಕ್ಕರೆಯ ಬಳಕೆಯನ್ನು ತೀರಾ ಕಡಿಮೆ ಮಾಡಿ. ಸಕ್ಕರೆಯಿಂದ ತಯಾರಾದ ಪಾನೀಯ, ಸಿಹಿಗಳಿಂದ ದೂರವಿರಿ. ಆದಷ್ಟು ಒಳ್ಳೆಯ, ಪೋಷಕಾಂಶ ಆಹಾರಗಳಿಗೆ ಒತ್ತು ನೀಡಿ.

ಯಾವಾಗಲೂ ಸಕ್ರಿಯರಾಗಿರುವುದರಿಂದ ಮಹಿಳೆಯರು ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಬಹುದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ, ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೆಚ್ಚುವರಿಯಾಗಿ, ಇದು ಒತ್ತಡವನ್ನು ನಿವಾರಿಸಲು ಮತ್ತು ತೂಕ ಇಳಿಸಲು ಬಹಳ ಸಹಕಾರಿ. ಲಘು ವ್ಯಾಯಾಮ, ವಾಕಿಂಗ್‌ ಅಂತಾ ಕೆಲ ದೈಹಿಕ ಚಟುವಟಿಕೆ ಮೈಗೂಡಿಸಿಕೊಳ್ಳಿ.

ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿಸಲು ಹೆಚ್ಚು ನೀರು ಸೇವಿಸಿ

Follow Us on :-