ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿಸಲು ಹೆಚ್ಚು ನೀರು ಸೇವಿಸಿ

ಉಸಿರಾಟ, ಬೆವರು ಮತ್ತು ಮೂತ್ರದ ಮೂಲಕ ನಮ್ಮ ದೇಹವು ಪ್ರತಿದಿನ ನೀರನ್ನು ಹೊರ ಹಾಕುತ್ತದೆ. ನಮ್ಮ ದೇಹದಲ್ಲಿರುವ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಚಲಿಸಲು, ನೀವು ಸಾಕಷ್ಟು ದ್ರವ ಪದಾರ್ಥಗಳನ್ನು ಅಥವಾ ಪಾನೀಯಗಳನ್ನು ಕುಡಿಯುವ ಅಥವಾ ತಿನ್ನುವ ಮೂಲಕ ಅದರ ನೀರಿನ ಸರಬರಾಜನ್ನು ಮರುಪೂರಣ ಮಾಡಬೇಕು.

photo credit social media

ಬೇಸಿಗೆಕಾಲ ಶುರುವಾಗಿ ಈಗಾಗಲೇ ಎರಡು ತಿಂಗಳುಗಳು ಮುಗಿದಿದ್ದು, ಇನ್ನೆರಡು ತಿಂಗಳು ಬಿಸಿಲು ಇನ್ನಷ್ಟು ಜಾಸ್ತಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಬೇಸಿಗೆ ಕಾಲದಲ್ಲಿ ನಾವು ಸದಾ ಆರೋಗ್ಯವಾಗಿರಲು ಪ್ರತಿದಿನ ಚೆನ್ನಾಗಿ ನೀರು ಕುಡಿಯಬೇಕು ಅಂತ ಹೇಳುವುದನ್ನು ನಾವೆಲ್ಲಾ ಅನೇಕ ಬಾರಿ ಕೇಳಿರುತ್ತೇವೆ.

ಆದರೆ ಬಹುತೇಕರಿಗೆ ದಿನದಲ್ಲಿ ತಾವು ಎಷ್ಟು ನೀರನ್ನು ಕುಡಿಯಬೇಕು ಅಂತ ಸ್ಪಷ್ಟವಾಗಿ ಗೊತ್ತಿರುವುದಿಲ್ಲ. ಅನೇಕ ಅಧ್ಯಯನಗಳು ವರ್ಷಗಳಿಂದ ವಿಭಿನ್ನವಾದ ಹೇಳಿಕೆಗಳನ್ನು ನೀಡುತ್ತಾ ಬಂದಿವೆ. ನಮ್ಮ ವೈಯಕ್ತಿಕ ನೀರಿನ ಅಗತ್ಯಗಳು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿವೆ.

ಉತ್ತಮ ಆರೋಗ್ಯಕ್ಕೆ ನೀರು ಅತ್ಯಗತ್ಯ ಅಂಶವಾಗಿದೆ. ದೇಹವು ಮೂತ್ರ ಮತ್ತು ಬೆವರಿನ ಮೂಲಕ ನಿರಂತರವಾಗಿ ನೀರನ್ನು ಹೊರಹಾಕುತ್ತದೆ. ಆದ್ದರಿಂದ, ಅತಿಯಾದ ಬಾಯಾರಿಕೆಯಿಂದ ತಪ್ಪಿಸಿಕೊಳ್ಳಲು ನಾವು ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಬೇಕು.

ನೀರು ನಮ್ಮೆಲ್ಲರ ಆರೋಗ್ಯಕ್ಕೆ ತುಂಬಾನೇ ಅತ್ಯಗತ್ಯ. ಏಕೆಂದರೆ ಇದು ನಮ್ಮ ದೇಹದ ತೂಕದ ಸುಮಾರು 50 ರಿಂದ 70 ಪ್ರತಿಶತದಷ್ಟಿರುತ್ತದೆ. ದೇಹದ ಬೆಳವಣಿಗೆಗೆ ನಮಗೆ ನೀರು ಬೇಕು. ದೇಹದ ಎಲ್ಲಾ ವ್ಯವಸ್ಥೆಗಳು ಸರಾಗವಾಗಿ ನಡೆಯುವಂತೆ ಮಾಡುವಲ್ಲಿ ನೀರು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಅಲ್ಲದೆ, ಕೆಲವೊಮ್ಮೆ, ಪ್ರೋಟೀನ್, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಗಳೊಂದಿಗೆ ನೀರನ್ನು ನಾಲ್ಕನೇ ಸೂಕ್ಷ್ಮ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ. ನಿಮ್ಮ ದೇಹದ ಪ್ರತಿಯೊಂದು ಜೀವಕೋಶ, ಅಂಗಾಂಶ ಮತ್ತು ಅಂಗದ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಗತ್ಯ. ನೀರು ನಮಗೆ ಸಹಾಯ ಮಾಡುವ ಒಂದು ಅಮೂಲ್ಯವಾದ ಪೋಷಕಾಂಶವಾಗಿದೆ.

ಮೂತ್ರವಿಸರ್ಜನೆ, ಬೆವರುವಿಕೆ ಮತ್ತು ಕರುಳಿನ ಚಲನೆಗಳ ಮೂಲಕ ತ್ಯಾಜ್ಯವನ್ನು ತೆಗೆದು ಹಾಕುತ್ತದೆ.

ಕುಡಿಯುವ ನೀರು ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಅಲರ್ಜಿ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಅಸ್ತಮಾವನ್ನು ಸರಾಗಗೊಳಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

ಮಾನಸಿಕ ಒತ್ತಡ , ಖಿನ್ನತೆಯ ಭಾವನೆ ನಿವಾರಣೆಗೆ ಪುದೀನಾ ಬಳಸಿ

Follow Us on :-