ಟೆಂಗಿನ ಹಾಲಿನಲ್ಲಿದೆ ದೇಹದ ಆರೋಗ್ಯಕ್ಕೆ ನೀಡುವ ಶಕ್ತಿ

ಕೇವಲ ಸೌಂದರ್ಯ ವೃದ್ಧಿಯಲ್ಲಿ ಮಾತ್ರ ತೆಂಗಿನ ಹಾಲು ಬಳಕೆಯಾಗುತ್ತದೆ ಎಂದುಕೊಳ್ಳಬೇಡಿ. ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ.ತೆಂಗಿನ ಹಾಲು ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯ ವಿಷಯದಲ್ಲೂ ಎತ್ತಿದ ಕೈ! ಮನೆಯಲ್ಲಿ ಯಾವುದಾದರೂ ಶುಭ ಸಂದರ್ಭದಲ್ಲಿ ತೊಗರಿ ಬೇಳೆ ಒಬ್ಬಟ್ಟು ಮಾಡಿದ ಸಂದರ್ಭದಲ್ಲಿ ನಮಗೆ ತೆಂಗಿನಕಾಯಿಯ ಹಾಲಿನ ಜ್ಞಾಪಕ ಬರುತ್ತದೆ. ಏಕೆಂದರೆ ಇವೆರಡೂ ಒಂದು ಉತ್ತಮ ಕಾಂಬಿನೇಷನ್. ಅದನ್ನು ಬಿಟ್ಟರೆ ಹೆಣ್ಣು ಮಕ್ಕಳ ಸೌಂದರ್ಯ ವೃದ್ಧಿಯಲ್ಲಿ ತೆಂಗಿನ ಹಾಲು ಸರಾಗವಾಗಿ ಬಳಕೆ ಆಗುತ್ತದೆ.

photo credit social media

ಆದರೆ ನೈಸರ್ಗಿಕವಾದ ಪೌಷ್ಟಿಕಾಂಶಗಳನ್ನು ಒಳಗೊಂಡ ತೆಂಗಿನ ಹಾಲಿನಲ್ಲಿ ಇನ್ನೂ ಬಹಳಷ್ಟು ಉಪಯೋಗಗಳಿವೆ. ಪ್ರತಿ ದಿನವೂ ನಮ್ಮ ಅಡುಗೆ ಅಥವಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಸಿ ತೆಂಗಿನಕಾಯಿ ಅಥವಾ ಕೊಬ್ಬರಿಯನ್ನು ಬಳಸುತ್ತೇವೆ. ಆದರೆ ತೆಂಗಿನ ಹಾಲನ್ನು ಅಷ್ಟಾಗಿ ಉಪಯೋಗಿಸುವುದಿಲ್ಲ. ಈ ಲೇಖನದಲ್ಲಿ ತೆಂಗಿನ ಹಾಲಿನ ವಿಶೇಷತೆಯ ಬಗ್ಗೆ ತಿಳಿಸಲಾಗಿದೆ...

ಹಸಿ ತೆಂಗಿನ ಕಾಯಿಯಿಂದ ಸಿಗುವ ತೆಂಗಿನ ಹಾಲು ಸ್ವತಃ ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ಆದರೆ ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ಕೊಬ್ಬಿನಂಶ ಆಗಿರುತ್ತದೆ.

ತೆಂಗಿನ ಹಾಲಿನಲ್ಲಿ ಲಭ್ಯ ಇರುವುದರಿಂದ ನಮ್ಮ ಮಾಂಸ - ಖಂಡಗಳ ಬೆಳವಣಿಗೆಯಲ್ಲಿ ಸಹಾಯ ಮಾಡುವುದು ಮಾತ್ರವಲ್ಲದೆ ನಮ್ಮ ದಿನ ನಿತ್ಯದ ವ್ಯಾಯಾಮ ಸಂದರ್ಭದಲ್ಲಿ ನಮ್ಮ ದೇಹದಿಂದ ಹಾನಿಯಾಗುವ ಶಕ್ತಿಯ ಪ್ರಮಾಣವನ್ನು ಮತ್ತೊಮ್ಮೆ ಸಮತೋಲನವಾಗಿಸುವ ಲಕ್ಷಣ ತೆಂಗಿನ ಹಾಲಿನಲ್ಲಿ ಕಂಡು ಬರುತ್ತದೆ.

ಒಳ್ಳೆಯ ಕೊಬ್ಬಿನ ಅಂಶಗಳು ನಮ್ಮ ದೇಹಕ್ಕೆ ಸೇರುವುದರಿಂದ ಹೆಚ್ಚು ಹೊತ್ತಿನ ತನಕ ಬೇರೆ ಆಹಾರ ಸೇವನೆ ಮಾಡಬೇಕು ಎನ್ನುವ ಬಯಕೆ ಉಂಟಾಗುವುದಿಲ್ಲ. ಇದರಿಂದ ನಮ್ಮ ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ದೈಹಿಕ ಸದೃಡತೆ ಕೂಡ ನಮಗೆ ಸಿಗುತ್ತದೆ.

ಕೆಲವರಿಗೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ. ಹಾಗಾಗಿ ಆಹಾರದಲ್ಲಿನ ಪೌಷ್ಟಿಕ ಸತ್ವಗಳು ಮತ್ತು ಎಲೆಕ್ಟ್ರೋಲೈಟ್ ಅಂಶಗಳು ದೇಹದ ಸರಿಯಾದ ಕಾರ್ಯ ನಿರ್ವಹಣೆಗೆ ಸಹಾಯಕ್ಕೆ ಬರುವುದಿಲ್ಲ. ಈ ಕಾರಣದಿಂದ ಮಲ ವಿಸರ್ಜನೆ ಸರಿಯಾದ ಸಮಯಕ್ಕೆ ಸರಿಯಾದ ರೀತಿ ಆಗುವುದಿಲ್ಲ.

ಜೀರ್ಣ ನಾಳದಲ್ಲಿ ಹೆಚ್ಚು ಪೌಷ್ಟಿಕಾಂಶಗಳನ್ನು ಮತ್ತು ಎಲೆಕ್ಟ್ರೋಲೈಟ್ ಅಂಶಗಳನ್ನು ಒದಗಿಸುವುದರಿಂದ ಹಿಡಿದು ಅಜೀರ್ಣತೆ ಮತ್ತು ಮಲಬದ್ಧತೆಯನ್ನು ದೂರಗೊಳಿಸಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕರುಳಿನ ಭಾಗದಲ್ಲಿ ಉಂಟು ಮಾಡುತ್ತದೆ.

ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೂ ತೊಂದರೆಯೇ ಮತ್ತು ಕಡಿಮೆಯಾದರೂ ತೊಂದರೆಯೇ. ಹಾಗಾಗಿ ಸರಿಯಾದ ಇನ್ಸುಲಿನ್ ಉತ್ಪತ್ತಿ ನಿರ್ವಹಣೆ ಮಾಡಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಿಕೊಳ್ಳಬಹುದು.

ಕರಿಬೇವಿನಲ್ಲಿದೆ ಆರೋಗ್ಯಕ್ಕೆ ರಾಮಬಾಣವಾಗಿರುವ ಅಂಶಗಳು

Follow Us on :-