ಕರಿಬೇವಿನಲ್ಲಿದೆ ಆರೋಗ್ಯಕ್ಕೆ ರಾಮಬಾಣವಾಗಿರುವ ಅಂಶಗಳು

ಹಿಂದಿನಿಂದಲೂ ಕೂದಲಿನ ಆರೋಗ್ಯ ರಕ್ಷಣೆಗೆ ಕರಿಬೇವನ್ನು ಬಳಸುತ್ತಿದ್ದರು. ಇದರಲ್ಲಿ ವಿಟಮಿನ್ ಅಂಶ ಅಧಿಕವಾಗಿದ್ದು, ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾದರೆ ಕೂದಲಿನ ಆರೋಗ್ಯದಲ್ಲಿ ಕರಿಬೇವಿನ ಪಾತ್ರ ಎಷ್ಟು? ಇದನ್ನು ಬಳಸುವುದು ಹೇಗೆ ತಿಳಿಯೋಣ.

photo credit social media

ಸೌಂದರ್ಯದ ವಿಷಯದಲ್ಲಿ ಹೆಣ್ಣುಮಕ್ಕಳಿಗಷ್ಟೇ ಕಾಳಜಿ ಎಂಬ ಕಾಲ ಈಗಿಲ್ಲ. ಈಗ ಗಂಡುಮಕ್ಕಳೂ ಸೌಂದರ್ಯದ ಕಾಳಜಿ ಮಾಡುತ್ತಾರೆ. ಇಂದಿನ ಮಿಲೇನಿಯಲ್ ಜಮಾನ ಚರ್ಮ ಹಾಗೂ ಕೂದಲಿನ ಮೇಲೆ ಹೆಚ್ಚು ಕಾಳಜಿ ಹೊಂದಿದ್ದಾರೆ.

ಒತ್ತಡದ ಜೀವನಶೈಲಿ, ಆಹಾರಪದ್ಧತಿ, ಕಲುಷಿತ ವಾತಾವರಣದ ಕಾರಣದಿಂದ ಕೂದಲಿನ ಆರೈಕೆ ಮಾಡುವುದು ಕಷ್ಟ. ಉದುರುವುದು, ತುದಿ ಸೀಳುವುದು, ಸಿಕ್ಕು ಉಂಟಾಗುವುದು, ತಲೆಹೊಟ್ಟು ಇಂತಹ ಸಮಸ್ಯೆಗಳಿಂದ ಹೈರಾಣಾಗುತ್ತೇವೆ.

ಕೂದಲಿನ ಆರೋಗ್ಯ ರಕ್ಷಣೆಗೆ ಹಿಂದಿನಿಂದಲೂ ಕರಿಬೇವನ್ನು ಬಳಸುತ್ತಿದ್ದರು. ಇದು ಊಟಕ್ಕೆ ಘಮ ಕೊಡುವುದು ಮಾತ್ರ, ಕೂದಲ ಕಾಳಜಿಯನ್ನೂ ಮಾಡುತ್ತದೆ. ನಮ್ಮ ಅಜ್ಜಿಯವರು ಕೂಡ ಕೂದಲಿನ ಆರೋಗ್ಯ ರಕ್ಷಣೆಗೆ ಇದನ್ನು ಬಳಸುತ್ತಿದ್ದರು ಎಂಬುದು ಸುಳ್ಳಲ್ಲ. ಇದರಲ್ಲಿ ವಿಟಮಿನ್ ಅಂಶ ಅಧಿಕವಾಗಿದ್ದು, ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾದರೆ ಕೂದಲಿನ ಆರೋಗ್ಯದಲ್ಲಿ ಕರಿಬೇವಿನ ಪಾತ್ರ ಎಷ್ಟು? ಇದನ್ನು ಬಳಸುವುದು ಹೇಗೆ ತಿಳಿಯೋಣ.

ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್ ಬಿ, ಸಿ, ಪ್ರೊಟೀನ್‌ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶಗಳಿದ್ದು, ಇದು ನೆತ್ತಿ ಹಾಗೂ ಕೂದಲಿನ ಬುಡದಲ್ಲಿ ರಕ್ತದ ಹರಿವಿನ ಪ್ರಮಾಣವನ್ನು ಉತ್ತೇಜಿಸುತ್ತದೆ. ಜೊತೆಗೆ ಕೋಶಗಳ ಪುನರ್ಜನ್ಮಕ್ಕೂ ಕಾರಣವಾಗುತ್ತದೆ. ಹೊಸ ಕೂದಲು ಹುಟ್ಟಲು ಹಾಗೂ ಕೂದಲಿನ ಬುಡ ಸದೃಢವಾಗಲು ನೆರವಾಗುತ್ತದೆ.

ಬಳಸುವುದು ಹೇಗೆ: ಒಂದು ಬೌಲ್‌ನಲ್ಲಿ ಮೆಂತ್ಯೆಕಾಳು, ಕರಿಬೇವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದಕ್ಕೆ ನೆಲ್ಲಿಕಾಯಿ ಸೇರಿಸಿ 2ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ ಕೂದಲಿನ ಬುಡಕ್ಕೆ ಹಚ್ಚಿ. 30 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಿ.

ಕರಿಬೇವಿನಲ್ಲಿನ ವಿಟಮಿನ್ ಬಿ ಹಾಗೂ ಪ್ರೊಟೀನ್ ಅಂಶ ಕೂದಲ ತುದಿ ಸೀಳುವುದನ್ನು ಕಡಿಮೆ ಮಾಡಿ, ಬೆಳವಣಿಗೆಗೆ ಸಹಾಯ ಮಾಡುತ್ತದೆ. ತುದಿ ಸೀಳುವುದು ಕಡಿಮೆಯಾದರೆ ಕೂದಲು ತುಂಡಾಗುವುದು, ಉದುರುವ ಪ್ರಮಾಣವೂ ಕಡಿಮೆಯಾಗುತ್ತದೆ.

ಆಹಾರಪದ್ಧತಿ, ಕಲುಷಿತ ವಾತಾವರಣದ ಕಾರಣದಿಂದ ಕೂದಲಿನ ಆರೈಕೆ ಮಾಡುವುದು ಕಷ್ಟ. ಉದುರುವುದು, ತುದಿ ಸೀಳುವುದು, ಸಿಕ್ಕು ಉಂಟಾಗುವುದು, ತಲೆಹೊಟ್ಟು ಇಂತಹ ಸಮಸ್ಯೆಗಳಿಂದ ಹೈರಾಣಾಗುತ್ತೇವೆ.

ಸಪೋಟ ಜ್ಯೂಸ್ ಕುಡಿಯಿರಿ ಕೇಶಕಾಯ ಪಡೆಯಿರಿ

Follow Us on :-